Sunday, April 20, 2025
Homeಸುತ್ತಾ-ಮುತ್ತಾಜಿಲ್ಲಾ ಪಂಚಮಸಾಲಿ ಸಭೆ: ಸಮಾಜದ ಸಂಘ ಒಂದೇ ಆಗಿರಲಿ! ಸಮಾಜದ ತೀರ್ಮಾನ!

ಜಿಲ್ಲಾ ಪಂಚಮಸಾಲಿ ಸಭೆ: ಸಮಾಜದ ಸಂಘ ಒಂದೇ ಆಗಿರಲಿ! ಸಮಾಜದ ತೀರ್ಮಾನ!

ಗದಗ: ಜಿಲ್ಲಾ ಪಂಚಮಸಾಲಿ ಸಮಾಜದ ವತಿಯಿಂದ ನಗರದ ನಿರೀಕ್ಷಣಾ ಮಂದಿರದಲ್ಲಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಶ್ರೀ ಪರಮಪೂಜ್ಯ ಜಯಮೃತ್ಯುಂಜಯ ಶ್ರೀಗಳು ಜಿಲ್ಲೆಗೆ ಆಗಮಿಸುವ ಹಿನ್ನೆಲೆಯಲ್ಲಿ ಪೂರ್ವಸಿದ್ಧತೆ ಬಗ್ಗೆ ಚರ್ಚಿಸಲಾಯಿತು.


ತಿಂಗಳ ಒಳಗಾಗಿ ಪಂಚಮಸಾಲಿ ಪೀಠಗಳಿಂದ ರಚನೆಯಾದ ಎಲ್ಲ ಸಂಘಗಳ ಪದಾಧಿಕಾರಿಗಳು, ಉಪ ಸಮಿತಿಗಳ ಪದಾಧಿಕಾರಿಗಳು ಸ್ವಯಂ ಪ್ರೇರಿತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಇಡೀ ಜಿಲ್ಲೆಯಲ್ಲಿ ಎಲ್ಲಾ ಪಂಚಮಸಾಲಿಗಳ ಒಳಗೊಂಡ ಒಂದೇ ಒಂದು ಸಂಘವನ್ನ ಮಾತ್ರ ರಚನೆ ಮಾಡುವಂತೆ ಸಭೆಯಲ್ಲಿ ನಿರ್ಧರಿಸಿಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಅನಿಲ್ ಪಾಟೀಲ ವಹಿಸಿದ್ದರು. ಹಿರಿಯರಾದ ಬಿ ಎಸ್ ಚಿಂಚಲಿ,ಎಂ ಎಸ್ ಪರ್ತಗೌಡ್ರು,ಬಸವರಾಜ ದೇಸಾಯಿ, ಎಸ್ ಎಸ್ ಹುರಕಡ್ಲಿ, ಶ್ರೀಶೈಲಪ್ಪ ಚಳ್ಕೇರಿ, ಬದ್ರೇಶ್ ಕುಸುಲಾಪುರ, ಶಿವು ಹಿರೇಮನಿಪಾಟೀಲ, ವಸಂತ ಪಡಗದ, ಬಸವರಾಜ, ನಿಂಗಪ್ಪ ಹುಗ್ಗಿ, ಬಾಬಣ್ಣ ಸುಂಕದ, ಸ್ವಾತಿ ಅಕ್ಕಿ, ಮಂಜುನಾಥ್ ಗುಡದೂರ, ಚೇತನ್ ಅಬ್ಬಿಗೇರಿ, ಬಸವರಾಜ್ ಕಲ್ಲೂರ, ಅಯ್ಯಪ್ಪ ಅಂಗಡಿ, ಸಂತೋಷ ಅಕ್ಕಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments