Home » News » ಜೀ ಕನ್ನಡದ ರಿಯಲ್‌ ಸ್ಟಾರ್ಸ್ ಅವಾರ್ಡ್ಸ್‌‌ 2025: ಶಿಕ್ಷಣ ತಜ್ಞ ಎಸ್.ವೈ.ಚಿಕ್ಕಟ್ಟಿ ಅವರಿಗೆ ಪ್ರಶಸ್ತಿ..

ಜೀ ಕನ್ನಡದ ರಿಯಲ್‌ ಸ್ಟಾರ್ಸ್ ಅವಾರ್ಡ್ಸ್‌‌ 2025: ಶಿಕ್ಷಣ ತಜ್ಞ ಎಸ್.ವೈ.ಚಿಕ್ಕಟ್ಟಿ ಅವರಿಗೆ ಪ್ರಶಸ್ತಿ..

by CityXPress
0 comments

ಕನ್ನಡಿಗರ ಮೆಚ್ಚಿನ ಜೀ ಕನ್ನಡ ನ್ಯೂಸ್‌ ವಾಹಿನಿಯು ರಾಜ್ಯದ ವಿವಿಧ ಕ್ಷೇತ್ರಗಳ ಗಣ್ಯರನ್ನು ಗುರ್ತಿಸಿ ರಿಯಲ್‌ ಸ್ಟಾರ್ಸ್ ಅವಾರ್ಡ್ಸ್‌‌ 2025 ಪ್ರದಾನ ಮಾಡಿದೆ. ಬುಧವಾರ ಸಂಜೆ  ಬೆಂಗಳೂರಿನ ಪ್ರತಿಷ್ಠಿತ ಅಶೋಕ್‌ ಹೋಟೆಲ್‌ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ 35 ಸಾಧಕರನ್ನ ಗೌರವಿಸಿ ಸನ್ಮಾನಿಸಲಾಯಿತು. ವಿಜ್ಞಾನ, ತಂತ್ರಜ್ಞಾನ, ಆರೋಗ್ಯ, ಕೃಷಿ, ಸಮಾಜ ಸೇವೆ, ರಾಜಕಾರಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಶ್ರಮಿಸುತ್ತಿರುವ ಸಾಧಕರನ್ನು ಅಭಿನಂದಿಸಲಾಯಿತು‌.ವಿಧಾನ ಪರಿಷತ್ ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿಯವರು ಘನ ಉಪಸ್ಥಿತಿ ವಹಿಸಿ ರಿಯಲ್ ಸ್ಟಾರ್ಸ್ ಅವರ ಸೇವೆ‌ಯನ್ನು ಕೊಂಡಾಡಿದರು. ಪ್ರತಿ ವರ್ಷವೂ ಜೀ ಕನ್ನಡ ನ್ಯೂಸ್ ವಾಹಿನಿಯು‌ ರಾಜ್ಯದ ಉದ್ದಗಲದ ಎಲೆ‌ ಮರೆಯ ಕಾಯಂತಿರೋ ಅಸಲಿ‌ ಸ್ಟಾರ್ಸ್ ಅವರನ್ನ ಗುರ್ತಿಸಿದ್ದಾರೆ. ಶಾಲು, ಹಾರವನ್ನ ಮೈಮೇಲೆ ಹಾಕಿದ ಮಾತ್ರಕ್ಕೆ ನಿಮ್ಮ  ಸೇವೆ ಮುಗಿಯಲ್ಲ. ಇನ್ನೂ ಬಹಳ, ಅಗಾಧ ಸಮಾಜಮುಖಿ‌ ಕಾರ್ಯಗಳಿಗೆ ಅಡಿಗಲ್ಲು ಆಗಲಿ ಅಂತ ಆಶೀರ್ವದಿಸಿದ್ರು..

ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶ್ರೀ ಶಿವರಾಜ್‌ ತಂಗಡಗಿ ಅವರು ಮಾತನಾಡಿ, ಜೀ‌ ಕನ್ನಡ  ನ್ಯೂಸ್ ವಾಹಿನಿಯ ಜನಪರ‌ ಕಾಳಜಿ, ರೈತಪರ ಕಾಳಜಿ ಗುಣಗಾನ ಮಾಡಿದರು.. ಇದೇ ವೇಳೆ ಕನ್ನಡ ಭಾಷೆಯ ವಿಚಾರದಲ್ಲಿ ಕಮಲ ಹಾಸನ್ ನೀಡಿರುವ ಹೇಳಿಕೆಯನ್ನ ಖಂಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಚಿತ್ರರಂಗದ ಹಿರಿಯರಿಗೆ ಹಾಗೂ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆಯಲಿದ್ದೇನೆ. ಹಿರಿಯ ನಟ ಕಮಲಹಾಸನ್ ತಮ್ಮ ಹೇಳಿಕೆಗೆ ಸ್ಪಷ್ಟನೆ ಕೊಡಬೇಕಿದೆ ಅಂತ ಒತ್ತಾಯಿಸಿದರು. ಇದೇ ವೇಳೆ, ಡಾ.ರಾಜಕುಮಾರ್ ಅವರು ಕನ್ನಡಕ್ಕಾಗಿ ಗೋಕಾಕ್ ಚಳವಳಿ ನಡೆಸಿದವರು. ಕನ್ನಡ ಭಾಷೆ ವಿಚಾರದಲ್ಲಿ ದೊಡ್ಮನೆ ಸದಾ ಮುಂದಿರಲಿದೆ. ಶಿವಣ್ಣ ಸಮ್ಮುಖದಲ್ಲಿ ಕನ್ನಡ ಭಾಷೆಯ ಇತಿಹಾಸ ಕೆದಕಿರುವುದು ಸರಿಯಲ್ಲ. ಕನ್ನಡಿಗರು ಸೌಮ್ಯವಾದಿಗಳು, ಭಾಷಾ ಸಹಿಷ್ಣುಗಳು.  ನಟ ಶಿವರಾಜ್ ಕುಮಾರ್ ತಕ್ಕ ಉತ್ತರ ಕೊಡ್ತಾರೆ ಅಂತಲೂ ಸಚಿವರು ಎಚ್ಚರಿಕೆ ನೀಡಿದರು.

ಬಳಿಕ ಮಾತಾಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು, ಕನ್ನಡ ಎಂದರೆ ನನ್ನೆದೆ ಕುಣಿದಾಡುತ್ತದೆ. ಶ್ವಾಸ ಹಿಗ್ಗುತ್ತದೆ. ಹಿರಿಯ ನಟರಾದ ಕಮಲ ಹಾಸನ್ ಅವರಿಂದ ಭಾಷಾ ಅವಹೇಳನ ನಿರೀಕ್ಷಿಸಿರಲಿಲ್ಲ. ಕನ್ನಡಕ್ಕಾಗಿ‌ ಜೀವ ಕೊಡಲು‌ ಕೂಡ ಸಿದ್ಧ ಅಂತ ಗುಟರು ಹಾಕಿದರು.

banner

ಮಲ್ಲೇಶ್ವರ ಬಿಜೆಪಿ ಶಾಸಕ ಹಾಗೂ ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು‌ ಕೂಡ ವೇದಿಕೆಯಲ್ಲಿದ್ದು ಸಾಧಕರ‌ ಮುಕುಟಕ್ಕೆ ಗರಿ ಮೂಡಿಸಿ ಅಭಿನಂದಿಸಿದರು.

ವೇದಿಕೆ ಮೇಲೆ ಹಿರಿಯ‌ ನಟಿ ತಾರಾ ಅನುರಾಧ, ನಿರ್ಮಾಪಕರಾದ ಗೀತಾ ಶಿವರಾಜಕುಮಾರ್ ಉಪಸ್ಥಿತರಿದ್ದರು.

ಕೊನೆಯದಾಗಿ ಜೀ‌ ಕನ್ನಡ ನ್ಯೂಸ್ ಸಂಪಾದಕಾರ ರವಿ.ಎಸ್ ಅವರು ಸಮಾರೋಪ ಭಾಷಣದಲ್ಲಿ ಎಲ್ಲಾ 35 ಅವಾರ್ಡಿಗಳ ಸಾಧನೆ ಕೊಂಡಾಡಿದರು. ಪ್ರತಿಭೆವುಳ್ಳ ಕನ್ನಡದ‌ ಮಣ್ಣಿನ‌ ಮಕ್ಕಳನ್ನ ರಾಜ್ಯಕ್ಕೆ ಪರಿಚಯಿಸಿದ್ದೇವೆ ಅವಾರ್ಡಿಗಳನ್ನ ಅಭಿನಂದಿಸಿದರು. ಮುಂದಿನ ಕಾರ್ಯಕ್ರಮದಲ್ಲಿ ಎಲೆಮರೆಯ ಕಾಯಿಯಂತಿರೋ ಮತ್ತಷ್ಟು ದೇಸಿ ಸಾಧಕರನ್ನ ಗುರ್ತಿಸಿ ಗೌರವಿಸಲಾಗುವುದು. ಈ‌ ನಿಟ್ಟಿನಲ್ಲಿ ನಮ್ಮ ತಂಡ ಕಾರ್ಯೋನ್ಮುಖವಾಗಿದೆ ಅಂತಲೂ ರವಿ ಎಸ್ ಅವರು ಹೇಳಿದರು. ಜೊತೆ ಜೀ‌ ಕನ್ನಡ ನ್ಯೂಸ್ ಸಿಬ್ಬಂದಿಯ ಪರಿಶ್ರಮಕ್ಕೆ‌ ಮೆಚ್ಚುಗೆ ಸೂಚಿಸಿದರು.

*ಪ್ರಶಸ್ತಿ ಪಡೆದ ಗಣ್ಯರು*

1. ಡಾ. ಎ.ಎಸ್‌. ಕಿರಣ್‌ ಕುಮಾರ್‌ – ಇಸ್ರೋ ಮಾಜಿ ಅಧ್ಯಕ್ಷರು

2. ಶ್ರೀ ಕಿರಣ್‌ಕುಮಾರ್‌ ತಿಪ್ಪಾರೆಡ್ಡಿ – ಸಮಾಜ ಸೇವಕರು

3. ಶ್ರೀ ಮಹಾಂತೇಶ್ ಸಿದಗೊಂಡ ಬಡಚಿ – ಶಿಕ್ಷಣ ತಜ್ಞ

4. ಶ್ರೀ ಎ.ಸಿ. ಶ್ರೀನಿವಾಸ್‌ – ಪುಲಿಕೇಶಿ ನಗರ ಶಾಸಕರು & ಸಮಾಜ ಸೇವಕರು

5. ಡಾ. ಬಿ.ಆರ್‌. ಸುಪ್ರೀತ್‌ – ಶಿಕ್ಷಣ ತಜ್ಞ

6. ಪೂಜ್ಯ ಶ್ರೀ ಗುರುಮೂರ್ತಿ ಗುರೂಜಿ – ಆಧ್ಯಾತ್ಮಿಕ ಸಂತರು

7. ಶ್ರೀ ಯೋಗಾನಂದ ಮೂರ್ತಿ – ಕೃಷಿಕರು ಮತ್ತು ಸಮಾಜ ಸೇವಕರು

8. ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ – ಸಮಾಜ ಸೇವಕರು

9. ಶ್ರೀ ಲೋಕೇಶ್‌ ತಾಳಿಕಟ್ಟೆ – ಶಿಕ್ಷಣ ತಜ್ಞ

10. ಶ್ರೀ ಎಸ್‌.ಎನ್‌. ಸಿದ್ದರಾಮಪ್ಪ – ನಿವೃತ್ತ ಪೊಲೀಸ್‌ ಅಧಿಕಾರಿ & ಸಮಾಜ ಸೇವಕರು

11. ಶ್ರೀ ಮಹೇಶ್‌ ಕುಮಾರ್‌ – ಮಹಾವೀರ್‌ ಪ್ರಾಜೆಕ್ಟ್ಸ್ ಸೇಲ್ಸ್‌ ಹೆಡ್‌

12. ಡಾ. ಬಿ. ಮಂಜುನಾಥ್ – ಶಿಕ್ಷಣ ತಜ್ಞ

13. ಶ್ರೀ ಎಸ್.ಎಲ್.ವೆಂಕಟೇಶ್ (ಬಾಬು) – ಸಮಾಜ ಸೇವಕರು

14. ಶ್ರೀ ಶಶಿ ದೇಶಪಾಂಡೆ – ಕಲಾವಿದರು

15. ಶ್ರೀ ರವೀಶ್ ಕೆ.ಪಿ. – ಉದ್ಯಮಿ

16. ಡಾ. ಪ್ರಹ್ಲಾದ್‌ ರಾಮರಾವ್‌ – ಡಿಆರ್‌ಡಿಒ ವಿಜ್ಞಾನಿ

17. ಡಾ. ಎಂ. ರಾಮಚಂದ್ರಪ್ಪ (ಹೂಡಿ ಚಿನ್ನಿ) – ಹೋರಾಟಗಾರರು

18. ಶ್ರೀ ಬಿ.ಹೆಚ್. ಅನಿಲ್‌ ಕುಮಾರ್‌ – ನಿವೃತ್ತ ಐಎಎಸ್‌ ಅಧಿಕಾರಿ & ಸಮಾಜ ಸೇವಕರು

19. ಡಾ. ಆರ್‌.ಎನ್‌.ಎಂ. ರಮೇಶ್‌ – ಪ್ರಗತಿಪರ ಚಿಂತಕ ಹಾಗೂ ಹೋರಾಟಗಾರ

20. ಶ್ರೀ ಸಿ.ಕೆ. ಪ್ರಕಾಶ್‌ – ಸಮಾಜ ಸೇವಕರು & ಪ್ರಗತಿಪರ ರೈತ

21. ಡಾ. ನಾಗಭೂಷಣ್‌ – ಮಕ್ಕಳ ತಜ್ಞರು

22. ಶ್ರೀ ಉತ್ತಮ್‌ ರಾವ್‌ ಸಾಹೇಬ್‌ ಪಾಟೀಲ್‌ – ಯುವ ಮುಖಂಡರು

23. ಶ್ರೀ ದೊಡ್ಡ ಗಣೇಶ್‌ – ಮಾಜಿ ಕ್ರಿಕೆಟಿಗ

24. ಶ್ರೀ ಎಂ.ಎ.ಆನಂದ್‌ – ಶಿಕ್ಷಣ ತಜ್ಞರು ಹಾಗೂ ಕೃಷಿಕ

25. ಡಾ. ಬಿ.ಎಸ್‌. ಪ್ರಹ್ಲಾದ್‌ – ಚೀಫ್‌ ಇಂಜಿನಿಯರ್‌ ಬಿಬಿಎಂಪಿ

26. ಶ್ರೀ ಕೆಂಪರಾಜು ಕೆಂಪೇಗೌಡ – ಸಮಾಜ ಸೇವಕರು

27. ಶ್ರೀ ಹನುಮಯ್ಯ ಭೀಮಯ್ಯ ಗುತ್ತೇದಾರ್‌ – ಯುವ ಮುಖಂಡರು

28. ಡಾ. ಸಲ್ಮಾನ್‌ ಪಟೇಲ್‌ – ತಜ್ಞ ವೈದ್ಯರು & ವ್ಯವಸ್ಥಾಪಕ ನಿರ್ದೇಶಕರು, ಸನ್ ರೈಸ್ ಹಾಸ್ಪಿಟಲ್, ಕಲಬುರ್ಗಿ

29. ಶ್ರೀ ಗೌರವ ಕುಮಾರ ದೇಶ್‌ಮುಖ – ಸಮಾಜ ಸೇವಕರು

30. ಶ್ರೀ ಕೃಷ್ಣಗೌಡ ವಿ. ಹುಲಕೋಟಿ – ಪ್ರಗತಿಪರ ರೈತ

31. ಶ್ರೀ ಎಸ್‌.ವೈ. ಚಿಕ್ಕಟ್ಟಿ – ಶಿಕ್ಷಣ ತಜ್ಞರು.

32. ಶ್ರೀ ವಿಶ್ವನಾಥ್‌ – ಪ್ರಗತಿಪರ ರೈತ

33. ಶ್ರೀ ಖಾಜಾ ಹುಸೇನ್‌ ಗುಳಗುಂದಿ – ಕೃಷಿ ಉದ್ಯಮಿ

34. ಶ್ರೀಮತಿ ರಾಜೇಶ್ವರಿ ಮಂಜುನಾಥ ಪವಾಡಿ – ಕಾಮಧೇನು ಸಂಜೀವಿನಿ ಮಹಿಳಾ ಸ್ವ-ಸಹಾಯ ಸಂಘ, ಕಬ್ಬೆನೂರು

35. ಶ್ರೀ ಲಕ್ಷ್ಮಣ್‌ ಎಲ್‌. – ರೈತ ಮುಖಂಡ

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb