ಝೀ ಕನ್ನಡ, ಸರಿಗಮಪದಲ್ಲಿ ಅದ್ಭುತವಾಗಿ ಹಾಡುವ ಮೂಲಕ ಜನಮನ್ನಣೆ ಗಳಿಸಿದ್ದ ಅಂಧ ಗಾಯಕಿ ಮಂಜಮ್ಮ ನಿಧನರಾಗಿದ್ದಾರೆ. ಮಂಜಮ್ಮ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಇವರಿಗೆ ರತ್ನಮ್ಮ ಎಂಬ ಸಹೋದರಿ ಇದ್ದಾರೆ. ಹುಟ್ಟಿನಿಂದ ಇಬ್ಬರೂ ಅಂಧರು.
ಹೊಟ್ಟೆಪಾಡಿಗಾಗಿ ದಂಡಿನ ಮಾರಮ್ಮ ದೇವಸ್ಥಾನದ ಮುಂದೆ ಹಾಡು ಹೇಳುತ್ತಿದ್ದವರನ್ನ, ಝೀ ಕನ್ನಡ, ಇವರ ಪ್ರತಿಭೆ ಗುರುತಿಸಿ ಜನಪ್ರೀಯ ಸಂಗೀತ ಕಾರ್ಯಕ್ರಮ ಸರಿಗಮಪ ಅವಕಾಶ ನೀಡಿತ್ತು. ಅದ್ಭುತವಾಗಿ ಹಾಡುವ ಮೂಲಕ ಕರ್ನಾಟಕದಲ್ಲಿ ಸಾಕಷ್ಟು ಜನಮನ್ನಣೆ ಗಳಿಸಿದ್ದರು. ಅಲ್ಲದೇ ಇವರ ಅತ್ಯಂತ ಬಡತನದ ಸ್ಥಿತಿ ನೋಡಿ ಚಿತ್ರನಟ, ಜಗ್ಗೇಶ್ ಮನೆ ಸಹ ಕಟ್ಟಿಸಿಕೊಟ್ಟಿದ್ದರು.

ಅಕ್ಕ ತಂಗಿ ಇಬ್ಬರೂ ಅಂಧರಾಗಿದ್ದು, ತಮ್ಮ ಹಾಡುಗಳ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇದೀಗ ಮಂಜಮ್ಮ ನಿಧನ ಹಿನ್ನೆಲೆ ಅಕ್ಕ ರತ್ನಮ್ಮ ಕಂಗಾಲಾಗಿದ್ದಾರೆ.