ಗದಗ: ನಿವೇನಾದ್ರೂ ನಿಮ್ಮ ಮಕ್ಕಳ ಕೈಯಲ್ಲಿ ವಾಹನ ಚಲಾಯಿಸೋಕೆ ಕೊಡ್ತಿದ್ದೀರಾ..ಹಾಗಾದ್ರೆ ಕೊಡೋದಕ್ಕೂ ಮುನ್ನ ಒಂದು ಬಾರಿ ಈ ಸುದ್ದಿ ನೋಡಿ..ಹೌದು, ಮಕ್ಕಳು ಹಠ ಮಾಡ್ತಾರೆ ಅಂತ ಕೇಳಿದ ತಕ್ಷಣ ಬೈಕ್ ಆಗಲಿ,ಕಾರ್ ಇನ್ನಿತರ ವಾಹನ ಕೊಡಬೇಡಿ. ಹೀಗೆ ಅಪ್ರಾಪ್ತರಿಗೆ ವಾಹನ ಚಲಾಯಿಸೋದಕ್ಕೆ ಕೊಟ್ಟವರಿಗೆ ಭಾರೀ ಮೊತ್ತದ ದಂಡ ಬಿದ್ದಿದೆ.
ಹೌದು, ಗದಗನಲ್ಲಿ ಅಪ್ರಾಪ್ತನಿಗೆ ಆಟೋ ಕೊಟ್ಟಿದ್ದಕ್ಕೆ ಆಟೋ ಮಾಲೀಕನಿಗೆ 25 ಸಾವಿರ ರೂಪಾಯಿ ದಂಡ ಬಿದ್ದಿದೆ. ಅಪ್ರಾಪ್ತ ಬಾಲಕ ವಾಹನ ಚಲಾಯಿಸುವ ವೇಳೆ ಪೊಲೀಸರು ಆತನನ್ನ ಹಿಡಿದು ನೋಟಿಸ್ ನೀಡಿದ್ದಾರೆ.

2025 ರ ಜ. 5 ರಂದು ಶನಿವಾರ ನಗರದ ಲದ್ವಾ ಸರ್ಕಲ್ ಬಳಿ ಪೊಲೀಸರು ವಾಹನವನ್ನ ಸೀಜ್ ಮಾಡಿದ್ದಾರೆ. 16 ವರ್ಷದ ಬಾಲಕ ಪ್ಯಾಸೆಂಜರ್ ಹತ್ತಿಸಿಕೊಂಡು ಆಟೋ ಓಡಿಸೋದಕ್ಕೆ ಮುಂದಾಗಿದ್ದಾನೆ. ಬೆಟಗೇರಿ ಮೂಲದ ವಿಬಿ ಬಿನ್ನಾಳ್ ಎಂಬಾತ ಅಪ್ತಾಪ್ತನಿಗೆ ಆಟೋ ಚಾಲನೆ ಮಾಡಲು ಕೊಟ್ಟಿದ್ದನು.
ಬಾಲಕನ ಏಜ್ ಪ್ರೂಫ್ ಚೆಕ್ ಮಾಡಿದ ಪೊಲೀಸರು, ಸಂಚಾರಿ ಪೊಲೀಸರು ವಾಹನ ಸೀಜ್ ಮಾಡಿದ್ದಾರೆ. ಪೊಲೀಸರ ನೋಟಿಸ್ ಪಡೆದು ಆಟೋ ಮಾಲೀಕ ಕೋರ್ಟ್ ಗೆ ಹಾಜರಾಗಿದ್ದಾನೆ. ಬಳಿಕ ವಿಚಾರಣೆ ನಡೆಸಿದ ಕೋರ್ಟ್ ವಾಹನ ಮಾಲೀಕನಿಗೆ 25 ಸಾವಿರ ರೂಪಾಯಿ ದಂಡ ವಿಧಿಸಿದೆ.
ಜಿಲ್ಲಾ ಮೆಜಿಸ್ಟ್ರೆಟ್ ನ್ಯಾಯಾಲಯದಲ್ಲಿ ಈ ಪ್ರಕರಣ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶರು ದಂಡ ವಿಧಿಸಿದ್ದಾರೆ. ಸದ್ಯ ದಂಡದ ಪ್ರತಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗಿದ್ದು, ಪೋಷಕರೇ ಎಚ್ಚರ.. ಮಕ್ಕಳಿಗೆ ವಾಹನ ಕೊಡುವ ಮುನ್ನ ಎಚ್ಚರ..ಎಚ್ಚರ ಅನ್ನೋ ಬರಹದೊಂದಿಗೆ ದಂಡದ ಪ್ರತಿ ವೈರಲ್ ಆಗಿದೆ..ನೀವೂ ಕೂಡ ಇನ್ಮುಂದೆ ಅಪ್ರಾಪ್ತರಿಗೆ ವಾಹನ ಕೊಡೋ ಮುನ್ನ ಒಂದು ಬಾರಿ ಯೋಚಿಸಿ.!