ಗದಗ: ಶೇರು ಮಾರುಕಟ್ಟೆಯಲ್ಲಿಇತ್ತೀಚಿನ ದಶಕಗಳಲ್ಲಿ ಅಗತ್ಯವಿರುವ ಮೋಸ,ವಂಚನೆಗಳು ಜರುಗುವುದು, ಜೊತೆಗೆ ಹಣದ ಅತಿಯಾದ ವ್ಯಾಮೋಹಕ್ಕೆ ಒಳಗಾಗಿ ಸರಿಯಾದ ವಿವೇಚನೆ ಇಲ್ಲದೇ ತಮ್ಮ ಹಣವನ್ನು ಜನತೆ ವಂಚಕರ ಸವಿಮಾತುಗಳಿಗೆ ಮಾರು ಹೋಗಿ ತಮ್ಮ ಆಸ್ತಿ ಅಂತಸ್ತನ್ನು ಪೂರ್ತಿಯಾಗಿ ಕಳೆದು ಕೊಳ್ಳುತ್ತಿರುವುದು ಅತ್ಯಂತ ಆಘಾತಕಾರಿ ಸಂಗತಿ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಅಪರಿಚಿತ ದೂರವಾಣಿಗೆ ಸಂಸ್ಥೆಗೆ ಸ್ಪಂದಿಸದಿರಲು ಎಂದು ರವಿ ಹುಚ್ಚಣ್ಣವರ ಕರೆ ನೀಡಿದರು.
ನಗರದ ಸ್ಟುಡೆಂಟ್ಸ್ಎಜ್ಯುಕೇಶನ್ ಸಂಸ್ಥೆಯ ಸನ್ಮಾರ್ಗ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸೆಂಟ್ರಲ್ ಡಿಪಾಜಿಟರಿ ಸರ್ವಿಸ್ ಲಿಮಿಟೆಡ್ (ಸಿ.ಡಿ.ಎಸ್.ಎಲ್) ನ ಆಶ್ರಯದಲ್ಲಿ ಜರುಗಿದ ಜಾಗತಿಕ ಹೂಡಿಕೆದಾರರ ಸಾಪ್ತಾಹದ ಅಂಗವಾಗಿ ಜರುಗಿದ ವಿಚಾರ ಸಂಕಿರಣದಲ್ಲಿತಮ್ಮಅಭಿಪ್ರಾಯವನ್ನು ವ್ಯಕ್ತಪಡಿಸುವುದರ ಜೊತೆ ಜಾಗರೂಕರಾಗಿರಿ ಜಾಗ್ರತೆಯಿಂದ ಜೀವನ ನಡೆಸಿ ಎಂದರು.
ಬೆಂಗಳೂರಿನಿಂದ ಆಗಮಿಸಿದ ಅಸಿಸ್ಟಂಟ ಜನರಲ್ ಮ್ಯಾನೆಜರ್(ಸಿ.ಡಿ.ಎಸ್.ಎಲ್) ಆದ ಶ್ರೀ ಕಾಂತರೆಡ್ಡಿ ವಿಶ್ವ ಹೂಡಿಕೆದಾರರ ಸಪ್ತಾಹದ ಮೂಲ ಉದ್ದೇಶ ಸಮಕಾಲೀನ ಜಗತ್ತಿನಲ್ಲಿ ಜರುಗುತ್ತಿರುವ ಸೈಬರ್ ಅಪರಾಧದ ಒಳಸುಳಿಗಳನ್ನು ವಿವರವಾಗಿ ತಿಳಿಸುತ್ತಾ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಮೊಬೈಲ್ ದಾಸರಾಗುತ್ತಿರುವ ಯುವ ಜನಾಂಗ ತಮ್ಮ ಭವಿಷ್ಯದಲ್ಲಿ ಹೂಡಿಕೆ ಮಾಡುವಾಗ ತುಂಬ ಎಚ್ಚರ ವಹಿಸಲು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಪ್ರೇಮಾನಂದ ರೋಣದ, ಸಾಂದರ್ಭಿಕವಾಗಿ ಮಾತನಾಡಿ, ಮೊಬೈಲ್‌ನಲ್ಲಿ ಜೀವನದ ಸನ್ಮಾರ್ಗಕ್ಕೆ ವಿವೇಕಯುತ ಬಾಳ್ವೆಗೆ ಉತ್ತಮವಾದುದನ್ನು ಆರಿಸಿಕೊಂಡು ಸಾಧ್ಯವಾದಷ್ಟು ನಿಮ್ಮ ಜೀವನವನ್ನುಸಂತೃಪ್ತದಿಂದ ಜೀವಿಸಿ ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಸಂಸ್ಥೆಯ ಚೇರಮನ್‌ರಾದ ಪ್ರೊ.ರಾಜೇಶ ಕುಲಕರ್ಣಿ, ಆಡಳಿತಾಧಿಕಾರಿಗಳಾದ ಶ್ರೀ.ಎಮ್.ಸಿ.ಹಿರೇಮಠ ಹಾಗೂ ನಿರ್ದೇಶಕರಾದ ಪ್ರೊ.ರಾಹುಲ್ ಒಡೆಯರ್, ಪ್ರೊ.ರೋಹಿತ್ ಒಡೆಯರ್, ಪ್ರೊ.ಪುನೀತ್ ದೇಶಪಾಂಡೆ, ಪ್ರೊ.ಸೈಯ್ಯದ್ ಮತೀನ್ ಮುಲ್ಲಾ ಹಾಗೂ ಕಾಲೇಜಿನ ಸಮಸ್ತ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಪ್ರೊ.ಮುರಳೀಧರ ಸಂಕನೂರ ನೆರವೇರಿಸಿದರೆ ಪ್ರೊ ಶಿವಕುಮಾರ ವಜ್ರಬಂಡಿ ವಂದನಾರ್ಪಣೆ ಮಾಡಿದರು. ವಿದ್ಯಾರ್ಥಿಗಳಿಗೆ (ಸಿ.ಡಿ.ಎಸ್.ಎಲ್) ಸಂಸ್ಥೆಯಿಂದ ಟಿಶರ್ಟ ವಿತರಣೆ ಮಾಡಿ ಸೈಕಲ್ ರ್ಯ್ಯಾಲಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.