Home » News » ಕೆಲವೇ ಗಂಟೆಗಳಲ್ಲಿ ಎಚ್ಚತ್ತ ಅಧಿಕಾರಿಗಳು, ಟ್ಯಾಂಕ್ ಸ್ವಚ್ಛತೆಗೆ ಮುಂದಾದ ಸಿಬ್ಬಂದಿ….!

ಕೆಲವೇ ಗಂಟೆಗಳಲ್ಲಿ ಎಚ್ಚತ್ತ ಅಧಿಕಾರಿಗಳು, ಟ್ಯಾಂಕ್ ಸ್ವಚ್ಛತೆಗೆ ಮುಂದಾದ ಸಿಬ್ಬಂದಿ….!

by CityXPress
0 comments

ಲಕ್ಷ್ಮೇಶ್ವರ : ತಾಲೂಕಿನ ಬಟ್ಟೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಂದ್ರಳ್ಳಿ ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ವಾಟರ್‌ ಟ್ಯಾಂಕ್‌ ಕಲುಷಿತಗೊಂಡಿದ್ದು, ಅದೇ ನೀರನ್ನು ಕುಡಿಯುವ ಜನ ಸಾಂಕ್ರಾಮಿಕ ರೋಗ ಭೀತಿ ಎದುರಿಸುತ್ತಿದ್ದಾರೆ ಎಂಬ ಆರೋಪದಡಿ ಇಂದು ಬೆಳ್ಳಿಗ್ಗೆ ಸಿಟಿ ಎಕ್ಸ್‌ಪ್ರೆಸ್‌ ನಲ್ಲಿ “ಸ್ವಚ್ಛತೆ ಮರೆತ ಗ್ರಾಪಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು…!”
ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಸಾರ ಮಾಡಿತ್ತು.

ವರದಿ : ಪರಮೇಶ ಎಸ್ ಲಮಾಣಿ

(ಇದು ಸಿಟಿ ಎಕ್ಸ್‌ಪ್ರೆಸ್‌ ಬಿಗ್ ಇಂಪ್ಯಾಕ್ಟ್ )

ಸುದ್ದಿ ಪ್ರಸಾರವಾದ ಬೆನ್ನಲೆ ಎಚ್ಚೆತ್ತ ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲವೇ ಗಂಟೆಗಳಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿನ ನೀರು ಸರಬರಾಜು ಮಾಡುವ ಟ್ಯಾಂಕ್ ಗಳನ್ನು ಸ್ವಚ್ಛತೆ ಮಾಡಲು ಮುಂದಾಗಿದ್ದು ಗ್ರಾಮಸ್ಥರಿಗೆ ಹರ್ಷ ವ್ಯಕ್ತವಾಗಿದೆ.

banner

ಕೋಟ್:
ಪಂಚಾಯತಿ ವ್ಯಾಪ್ತಿಗೆ ಬರುವಂತ ಗ್ರಾಮಗಳಲ್ಲಿ ಈ ಮೊದಲು ನೀರಿನ ಟ್ಯಾಂಕ್ ಗಳನ್ನು ಸಚ್ಛಗೊಳಿಸಲಾಗಿದೆ. ಆದರೆ ನನಗೆ ಕುಂದ್ರಳ್ಳಿ ಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವ್ಯಾಟರ್ ಮ್ಯಾನ್ ನ ಮಾಹಿತಿ ನೀಡದಿರುವುದಕ್ಕೆ ಹೀಗಾಗಿದೆ. ನಾನು ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳನ್ನು ನೀಡಲು ಮೊದಲ ಆದ್ಯತೆ ನೀಡುತ್ತಿದ್ದೆನೆ.

ಹನಮಂತಪ್ಪ ಲಮಾಣಿ.
ಅಭಿವೃದ್ಧಿ ಅಧಿಕಾರಿಗಳು, ಗ್ರಾ.ಪಂ ಬಟ್ಟೂರು

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb