ಬೆಂಗಳೂರು:ಸದ್ಯ ನಿಮಗೆಲ್ಲ ಗೊತ್ತಿರುವಂತೆ ದರ್ಶನ್ ಪ್ರಕರಣ ಇಂದು ನಾಳೆ ಮುಗಿಯುವಂತದ್ದಲ್ಲ. ಈಗಾಗಲೇ ಹಲವಾರು ಬೆಳವಣಿಗೆಗಳು ಪ್ರಕರಣದಲ್ಲಿ ಬಂದು ಹೋಗಿವೆ.
ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣ ಸದ್ಯ ಕೋರ್ಟನ ಆವರಣದಲ್ಲಿ ಸಾಕಷ್ಟು ಸದ್ದು ಮಾಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರ ಜಾಮೀನಿನ ಭವಿಷ್ಯ ಇಂದು ಹೈಕೋರ್ಟ್ಲ್ಲಿ ನಿರ್ಧಾರವಾಗಲಿದೆ.
ಬೆನ್ನು ನೋವಿನ ಕಾರಣ ತಿಳಿಸಿ ದರ್ಶನ್ ಮಧ್ಯಂತರ ಜಾಮೀನು ಪಡೆದಿದ್ದರು. ಆಸ್ಪತ್ರೆಗೆ ದಾಖಲಾಗಿ ಇಷ್ಟು ದಿನ ಕಳೆದರೂ ಕೂಡ ನಟ ದರ್ಶನ್ ಸರ್ಜರಿ ಮಾಡಿಸಿಕೊಂಡಿಲ್ಲ. ಹಾಗಾಗಿ ಇಂದು ಹೈಕೋರ್ಟ್ನಲ್ಲಿ ನಡೆಯುವ ಇಂದಿನ ವಿಚಾರಣೆ ಮಹತ್ವ ಪಡೆದುಕೊಂಡಿದೆ.
ಶಸ್ತ್ರಚಿಕಿತ್ಸೆಗೆ ಒಳಗಾಗದ್ದಕ್ಕೆ ಸೂಕ್ತ ಕಾರಣ ತಿಳಿಸದಿದ್ದರೆ ಅವರ ಜಾಮೀನು ಮತ್ತೇ ರದ್ದಾಗಲಿದೆ. ಹೀಗಾಗಿ ಸೂಕ್ತ ಕಾರಣ ನೀಡಿ, ಜಾಮೀನು ಮುಂದುವರೆಸಬೇಕಾಗಿದೆ.