ಇತ್ತೀಚಿಗಷ್ಟೇ ಪತ್ನಿ ಕಾಟಕ್ಕೆ ಉತ್ತರ ಪ್ರದೇಶದ ಟೆಕ್ಕಿ ಅತುಲ್ ಸುಭಾಷ್ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ದೇಶಾದ್ಯಂತ ಚರ್ಚೆಗೆ ನಾಂದಿಯಾಗಿತ್ತು. ಆತುಲ್ ಸುಭಾಷ್ ಪ್ರಕರಣದ ಬೆನ್ನಲ್ಲೆ, ಪತ್ನಿ, ಮಾವನ ಕಿರುಕುಳಕ್ಕೆ ಬೇಸತ್ತು ಪೊಲೀಸ್ ಕಾನ್‌ಸ್ಟೇಬಲ್ ತಿಪ್ಪಣ್ಣ ಅನ್ನೋರು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದರು.
ಆದರೆ ಇಂಥಹ ಪ್ರಕರಣಗಳು ಅದ್ಯಾಕೋ ಇಲ್ಲಿಗೆ ನಿಂತಂತೆ ಕಾಣುತ್ತಿಲ್ಲ. ಇವೆರೆಡು ಘಟನೆ ಮಾಸುವ ಮುನ್ನವೇ ಪತ್ನಿಯ ಕಿರುಕುಳ & ಅಕ್ರಮ ಸಂಬಂಧದಿಂದ ಬೇಸತ್ತು ಬಾಲರಾಜ್(41) ಅನ್ನುವ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಂಗಳೂರಿನ ಹೆಸರಘಟ್ಟ ರಸ್ತೆ ಸಿಲುವೆಪುರದಲ್ಲಿ ಈ ಘಟನೆ ನಡೆದಿದೆ.ಸದ್ಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.