Home » News » ಆಂಗ್ಲರ ವಿರುದ್ಧದ ಟೆಸ್ಟ್ ಸರಣಿಗೆ ಮೊದಲು ವಿರಾಟ್ ಕೊಹ್ಲಿಯಿಂದ ಶಾಕ್: ನಿವೃತ್ತಿಯ ಹಿಂದೆ ಭುಜದ ಸಮಸ್ಯೆಯೇ ಕಾರಣವೇ?

ಆಂಗ್ಲರ ವಿರುದ್ಧದ ಟೆಸ್ಟ್ ಸರಣಿಗೆ ಮೊದಲು ವಿರಾಟ್ ಕೊಹ್ಲಿಯಿಂದ ಶಾಕ್: ನಿವೃತ್ತಿಯ ಹಿಂದೆ ಭುಜದ ಸಮಸ್ಯೆಯೇ ಕಾರಣವೇ?

by CityXPress
0 comments

ಟೀಂ ಇಂಡಿಯಾದ ಭರಾಟೆಯ ಬ್ಯಾಟ್ಸ್ಮನ್, “ಕಿಂಗ್” ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮಹತ್ವದ ಟೆಸ್ಟ್ ಸರಣಿಗೆ ಮುನ್ನ ನಿವೃತ್ತಿ ಘೋಷಿಸಿದ ಸುದ್ದಿ ಕ್ರಿಕೆಟ್ ಪ್ರೇಮಿಗಳಲ್ಲಿ ಆಘಾತ ಮೂಡಿಸಿದೆ. ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಕೊಹ್ಲಿಯ ಈ ನಿರ್ಧಾರಕ್ಕೆ ನಿಖರ ಕಾರಣವೇನು? ಎಂಬ ಪ್ರಶ್ನೆ ಎಲ್ಲೆಡೆ ಕೇಳಿ ಬರುತ್ತಿದ್ದು, ಇದೀಗ ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ ಈ ಬಗ್ಗೆ ಚರ್ಚೆಗೆ ತೀರ್ಪು ನೀಡಿರುವಂತೆ ಮಾತನಾಡಿದ್ದಾರೆ.

ಪನೇಸರ್ ಅವರ ಅಭಿಪ್ರಾಯ ಪ್ರಕಾರ, ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ದಿಢೀರ್ ಹಿಮ್ಮೆಟ್ಟಲು “ಆಫ್‌ಸೈಡ್ ದೌರ್ಬಲ್ಯ”ವೇ ಪ್ರಮುಖ ಕಾರಣವಾಗಿದೆ. ಆಫ್ ಸ್ಟಂಪ್ ಹೊರಗೆ ಬರುವ ಚೆಂಡುಗಳನ್ನು ಖಚಿತವಾಗಿ ಆಡಲು ಕೊಹ್ಲಿ ತಡಕಾಡುತ್ತಿದ್ದರೆಂದು ಅವರು ಹೇಳಿದ್ದಾರೆ. ಈ ಸಮಸ್ಯೆಯು 2014 ರ ಇಂಗ್ಲೆಂಡ್ ಸರಣಿಯಿಂದಲೇ ಆರಂಭವಾಗಿ, ಆ ಸಮಯದಲ್ಲಿ ಜೇಮ್ಸ್ ಅ್ಯಂಡರ್ಸನ್ ಅವರ ಎಸೆತಗಳ ವಿರುದ್ಧ ಕೊಹ್ಲಿ ದಣಿದಿದ್ದ ದೃಶ್ಯ ಕ್ರಿಕೆಟ್ ಅಭಿಮಾನಿಗಳಿಗೆ ಇಂದಿಗೂ ನೆನಪಿದೆ.

ಹಾಗೆಂದೇನಾದರೂ 2018ರ ಸರಣಿಯಲ್ಲಿ ಕೊಹ್ಲಿ ತಮ್ಮ ಆಫ್‌ಸೈಡ್ ದೌರ್ಬಲ್ಯವನ್ನು ನಿಯಂತ್ರಿಸಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆದರೆ ಇತ್ತೀಚಿನ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಪಂದ್ಯಗಳಲ್ಲಿ, ಮತ್ತೆ ಆ ಬಲ ಭಾಗದ ಸಮಸ್ಯೆ ದರ್ಶನ ಕೊಟ್ಟಿತು. ನಾಲ್ಕನೇ ಹಾಗೂ ಐದನೇ ಸ್ಟಂಪ್ ಲೈನ್ ಎಸೆತಗಳಲ್ಲಿ ಅವರು ಕ್ಯಾಚ್ ನೀಡುತ್ತಾ ಔಟಾಗಿರುವುದು, ಆಕ್ರಮಣಕಾರಿ ಶೈಲಿಯು ಹಿಂದೆ ಸರಿದಂತಾಯಿತು.

ಪನೇಸರ್ ಅಭಿಪ್ರಾಯದಲ್ಲಿ, ಇಂಗ್ಲೆಂಡ್‌ನ ಪಿಚ್‌ಗಳು ಹೆಚ್ಚು ಸ್ವಿಂಗ್ ಮತ್ತು ಬೌನ್ಸ್ ಹೊಂದಿರುವುದರಿಂದ, ಅಲ್ಲಿ ಕೊಹ್ಲಿಗೆ ಬ್ಯಾಟಿಂಗ್ ಮಾಡುವುದು ಕಷ್ಟವಾಗಬಹುದು ಎಂಬ ಆತಂಕವೇ ಅವರಿಗೆ ಈ ನಿರ್ಧಾರಕ್ಕೆ ದಾರಿ ಮಾಡಿಕೊಟ್ಟಿರಬಹುದು. ವಿಶೇಷವಾಗಿ ಹೈ-ಬೌನ್ಸ್ ಎಸೆತಗಳ ವಿರುದ್ಧ ಕೊಹ್ಲಿಯ ಕೊನೆಯ ಆಟಗಳಲ್ಲಿ ಕಾಣಿಸಿಕೊಂಡ ಹಿನ್ನಡೆಯು, ಈ ನಿರ್ಧಾರಕ್ಕೆ ಹಿನ್ನಲೆ ಆಗಿರಬಹುದು.

banner

14 ವರ್ಷಗಳ ಕಾಲ ಟೀಮ್ ಇಂಡಿಯಾದ ಪರ ದಿಗ್ಗಜ ಆಟಗಾರನಾಗಿ ಬಿರುಗಾಳಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಕೊಹ್ಲಿ, ಇದೀಗ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳುವ ಮೂಲಕ ಒಂದು ಯುಗಕ್ಕೆ ವಿದಾಯ ಹೇಳಿದಂತಾಗಿದೆ.

ಈಗ ಮೊತ್ತಮೆಲ್ಲ ಕಿಂಗ್ ಕೊಹ್ಲಿಯ ಬ್ಯಾಟಿಂಗ್ ಕಣ್ತುಂಬಿಕೊಳ್ಳಬೇಕಾದರೆ ಏಕದಿನ ಪಂದ್ಯಗಳು ಹಾಗೂ ಐಪಿಎಲ್ ಟೂರ್ನಿಗಳವರೆಗೆ ಕಾಯಬೇಕು. ಇತ್ತ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ, ಕೊಹ್ಲಿಯಿಲ್ಲದೆ ಹೋರಾಡಲು ಸಜ್ಜಾಗಿದೆ. ಐದು ಟೆಸ್ಟ್‌ಗಳ ಈ ಮಹಾಸರಣಿ ಜೂನ್ 20 ರಿಂದ ಆರಂಭವಾಗಲಿದ್ದು, ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ನಿರೀಕ್ಷೆಯ ಕ್ಷಣಗಳು ಮೊದಲೇ ಆರಂಭವಾಗಿವೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb