ಗದಗ: ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ತಕ್ಷಣ ಪ್ರತಿಕ್ರಿಯಿಸಿದ ಭಾರತೀಯ ಸೇನೆಯು, ಭಾರತೀಯ ವಾಯುಪಡೆಯ ಜತೆಗೂಡಿ ‘ಆಪರೇಷನ್ ಸಿಂಧೂರ’ ಎಂಬ ಹೆಸರಿನಲ್ಲಿ ಯಶಸ್ವೀ ಸೇನಾ ಕಾರ್ಯಾಚರಣೆ ನಡೆಸಿ, ಕೇವಲ 23 ನಿಮಿಷಗಳಲ್ಲಿ ಪಾಕಿಸ್ತಾನದ ಒಟ್ಟು 9 ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿ, 70 ಕ್ಕೂ ಹೆಚ್ಚು ಉಗ್ರರನ್ನು ಸಂಹಾರ ಮಾಡುವಲ್ಲಿ ಯಶಸ್ವಿಯಾಗಿದೆ. ಈ ವಿಶಿಷ್ಟ ಕಾರ್ಯಾಚರಣೆ ಮೂಲಕ ಭಾರತೀಯ ಸೇನೆ ಮತ್ತೆ ಮೆಚ್ಚಲಾರ್ಹ ಕಾರ್ಯಸಾಧನೆ ಮಾಡಿದ್ದು, ರಾಷ್ಟ್ರದ ಗೌರವವನ್ನು ಮತ್ತಷ್ಟು ಉನ್ನತಮಟ್ಟಕ್ಕೆ ಏರಿಸಿದೆ.
ಭಾರತೀಯ ಸೇನೆಯ ಈ ಶೂರತೆ ಮತ್ತು ಕಾರ್ಯಕ್ಷಮತೆಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಗದಗನಲ್ಲಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ವಿಜಯೋತ್ಸವವನ್ನು ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ಆಶ್ರಮದಲ್ಲಿ ಪೂಜ್ಯರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸೇನೆಗೆ ಆತ್ಮಬಲದೊಂದಿಗೆ ದೈವಬಲವೂ ಸಿಕ್ಕು ದೇಶದ ರಕ್ಷಣೆಗಾಗಿ ಭಾರತೀಯ ಸೇನೆ ಇನ್ನಷ್ಟು ಶಕ್ತಿಶಾಲಿಯಾಗಲೆಂದು ಸಂಘಟನೆಯ ಪರವಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ನಾಯಕ ಚಂದ್ರಕಾಂತ ಚವ್ಹಾಣ ಅವರು, “ಭಾರತೀಯ ಸೇನೆ ಪಾಕಿಸ್ತಾನ ಮತ್ತು ಭಯೋತ್ಪಾದಕರ ಅಡಗುತಾಣಗಳನ್ನು ನಾಶಮಾಡಿರುವುದು ಎಳೆಗಟ್ಟಿದ ಹುಲಿಯ ಶಕ್ತಿಯನ್ನೇ ತೋರಿಸಿದೆ. ದೇಶದ 140 ಕೋಟಿ ನಾಗರಿಕರು ಸೇನೆಗೆ ನಿಭಾಯಿಸಿದ ಈ ಕಾರ್ಯಕ್ಕಾಗಿ ಹೆಮ್ಮೆಪಡುತ್ತಿದ್ದಾರೆ. ನಾವು ಸದಾ ಸೇನೆಯ ಬೆನ್ನಹಿತವಾಗಿದ್ದೇವೆ,” ಎಂದು ಹೇಳಿದರು.

ಮೇಲಿನ ಪೋಸ್ಟ್ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ
ವಿಜಯೋತ್ಸವ ಕಾರ್ಯಕ್ರಮದಲ್ಲಿ ಸಂಘಟನೆಯ ಹಲವು ಪ್ರಮುಖರು ಭಾಗವಹಿಸಿದ್ದರು. ಅವರಲ್ಲಿ ಭಾಷಾ ಸಾಬ್ ಮಲ್ಲಸಮುದ್ರ, ನಾಗರಾಜ ಕ್ಷತ್ರಿ, ವಿಠ್ಠಲ್ ಬೆಂತೂರ, ಮೇಘರಾಜ ಮೇಲ್ಮನೆ, ಮಂಜುನಾಥ ಕುರುಬರ, ಮುತ್ತು ಪೂಜಾರ, ಸಂತೋಷ ಪೂಜಾರ, ಎಲ್ಲಪ್ಪ ಮೇಲ್ಮನಿ, ಸತ್ಯನ ಗೌಡ ಗೌಡರ, ಅಲ್ತಾಫ್, ಸಾಧಿಕ್, ಅನ್ನಪ್ಪ ಹಾಗೂ ಇತರ ಕಾರ್ಯಕರ್ತರು ಭಾಗವಹಿಸಿದ್ದರು.
