ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಅಪರೂಪದ ಕಲಾವಿದ ಹಾಗೂ ಹಿರಿಯ ಹಾಸ್ಯನಟ ಬ್ಯಾಂಕ್ ಜನಾರ್ದನ್ (ವಯಸ್ಸು 76) ಇಂದು ನಸುಕಿನ ಜಾವ 2:30ಕ್ಕೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕ ತ್ಯಜಿಸಿದರು.
2023ರಲ್ಲಿ ಹೃದಯಾಘಾತವಾಗಿದ್ದ ಅವರು ಆಂಜಿಯೋಗ್ರಾಂ ಚಿಕಿತ್ಸೆಗೆ ಒಳಪಟ್ಟಿದ್ದರು. ನಂತರದಿಂದಲೇ ಅವರು ದೈಹಿಕವಾಗಿ ತೀವ್ರವಾಗಿ ಕುಗ್ಗುತ್ತಿದ್ದರು.

ಮೇಲಿನ ಈ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಬ್ಯಾಂಕ್ ಜನಾರ್ದನ್, ಅವರ ವೃತ್ತಿಜೀವನದಲ್ಲಿ 800ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಹಾಗೂ ಹಾಸ್ಯ ಪಾತ್ರಗಳಲ್ಲಿ ಅಭಿನಯಿಸಿ ಕನ್ನಡ ಚಿತ್ರರಂಗದಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ವಿಭಿನ್ನ ಪಾತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು, ಚಿತ್ರರಂಗದ ನಟನೆಗೆ ಹೊಸದೊಂದು ಚೈತನ್ಯ ನೀಡಿದವರಾಗಿ ಪರಿಗಣಿಸಲಾಗುತ್ತದೆ.
ಹೆಸರಿನ ಹಿಂದಿರುವ ಕಥೆ:
ಜನಾರ್ದನ್ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಬಳಿ ಇರುವ ಒಂದು ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದರು. ನಾಟಕಗಳ ಪ್ರತಿಯೊಬ್ಬ ಅಭಿಮಾನಿಯಾಗಿ ಅವರು ಕೆಲಸದ ಜೊತೆಗೆ ನಾಟಕಗಳಲ್ಲಿ ಪಾತ್ರವಹಿಸುತ್ತಿದ್ದರು. ಅವರ ನಾಟಕಾಭಿನಯ ನೋಡಿ ಹಿರಿಯ ನಟ ಧೀರೇಂದ್ರ ಗೋಪಾಲ್ ಅವರು ಸಂತೋಷಗೊಂಡು, ಜನಾರ್ದನ್‌ಗೆ ಬೆಂಗಳೂರಿಗೆ ಬರುವಂತೆ ಸಲಹೆ ನೀಡಿದರು. ನಂತರ ಅವರು ಚಿತ್ರರಂಗ ಪ್ರವೇಶಿಸಿ “ಬ್ಯಾಂಕ್ ಜನಾರ್ದನ್” ಎಂಬ ಹೆಸರಿನಿಂದ ಜನಪ್ರಿಯರಾದರು.
ಅವರ ನಿಧನದಿಂದ ಕನ್ನಡ ಚಿತ್ರರಂಗದ ಅಂಕಣವೊಂದು ಖಾಲಿಯಾದಂತಾಗಿದೆ.
