ವೀರಶೈವ ಲಿಂಗಾಯತ ಸ್ಪೋರ್ಟ್ಸ್ ಫೌಂಡೇಶನ್ ಹುಬ್ಬಳ್ಳಿ (ರಿ) ವತಿಯಿಂದ ಇದೇ ಮೊಟ್ಟಮೊದಲ ಬಾರಿಗೆ ಸಮಾಜದ ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಧಾರವಾಡ ಜಿಲ್ಲಾ ಮಟ್ಟದ ವೀರಶೈವ ಲಿಂಗಾಯತ ಕ್ರಿಕೆಟ್ ಪ್ರೀಮಿಯರ್ ಲೀಗ್’ನ್ನು ಮೇ.14 ರಿಂದ ಮೇ. 18 ರವರೆಗೆ ಇಲ್ಲಿನ ನೆಹರೂ ಮೈದಾನದಲ್ಲಿ ಆಯೋಜಿಸಲಾಗಿದೆ.
ಈ ಪಂದ್ಯಾವಳಿ ಹೊನಲು-ಬೆಳಕು ಪಂದ್ಯಾವಳಿಯಾಗಿದ್ದು, ವೀರ ಶೈವ ಲಿಂಗಾಯತ ಸಮುದಾಯದ ಎಲ್ಲ ಒಳ ಪಂಗಡದವರು ಈ ಪಂದ್ಯಾವಳಿಯಲ್ಲಿ ಭಾಗವಹಿಸಬಹುದು. ಮೊದಲು ನೊಂದಣಿ ಮಾಡಿಕೊಂಡ 16 ತಂಡಗಳಿಗೆ ಮಾತ್ರ ಪಂದ್ಯಾವಳಿಯಲ್ಲಿ ಭಾಗವಹಿಸಲು ಅವಕಾಶವಿದ್ದು, ಹೀಗಾಗಿ ಜಿಲ್ಲೆಯ ಸಮಾಜದ ಆಸಕ್ತರು ಎಪ್ರಿಲ್, 27 ರಿಂದ ಆರಂಭವಾಗುವ ನೋಂದಣಿಯಲ್ಲಿ ಮೇ.7 ರೊಳಗೆ ತಮ್ಮ ತಂಡಗಳ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಶಂಭು ಲಕ್ಷ್ಮೇಶ್ವರಮಠ (9591471186), ವಿರೇಶ ಮುದಕವಿ (9900213899), ಮಂಜು ಮುಗಬಸ್ತ್ (9845861588), ಪ್ರವೀಣ ಬೆಲ್ಲದ (9141168911) ಗೆ ಸಂಪರ್ಕಿಸಬಹುದು ಎಂದು ಫೌಂಡೇಶನ್ ಅಧ್ಯಕ್ಷ ಶಂಭು ಲಕ್ಷ್ಮೇಶ್ವರಮಠ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.