Sunday, April 20, 2025
Homeಸುತ್ತಾ-ಮುತ್ತಾವಾಹನ ಚಲಾಯಿಸುವಾಗ ಮೊಬೈಲ್‍ ಬಳಸಿದರೆ ಬೀಳಲಿದೆ ದಂಡ !

ವಾಹನ ಚಲಾಯಿಸುವಾಗ ಮೊಬೈಲ್‍ ಬಳಸಿದರೆ ಬೀಳಲಿದೆ ದಂಡ !

ಧಾರವಾಡ: ಹುಬ್ಬಳ್ಳಿ-ಧಾರವಾಡ ಪೊಲೀಸ್‍ ಆಯುಕ್ತರಾದ ಎನ್‍. ಶಶಿಕುಮಾರ್‍ ಇಂದು ನಗರದಲ್ಲಿ ವಾಹನ ಚಲಾಯಿಸುವಾಗ ಮೊಬೈಲ್‍ ಬಳಕೆಯ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನಗರದ 3 ಪ್ರದೇಶಗಳಲ್ಲಿ ಇಂತಹ ಸವಾರರನ್ನು ಗುರುತಿಸಿ ಅವರಿಗೆ ದಂಡ ವಿಧಿಸಲಾಗಿದೆ. ವಾಹನ ಚಲಾಯಿಸುವಾಗ ಮೊಬೈಲ್‍ ಬಳಸುವುದರಿಂದ ತಾವು ಸ್ವತಹ ಅಪಘಾತಕ್ಕೆ ಒಳಗಾಗುವುದು ಅಥವಾ ಅಮಾಯಕರ ಮತ್ತು ಮಹಿಳೆಯರಿಗೆ/ಮಕ್ಕಳಿಗೆ ಅಪಘಾತದಿಂದ ತೊಂದರೆ ನೀಡಿದಂತಹ ಅನೇಕ ದೂರುಗಳು ಈಗಾಗಲೆ ದಾಖಲಾಗಿದ್ದು ಈ ಕಾರಣದಿಂದ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಆಯುಕ್ತರು, ದ್ವಿಚಕ್ರವಾಹನಗಳಿಗೆ ರೂ. 1500/-, ತ್ರಿಚಕ್ರ ಮತ್ತು ನಾಲ್ಕು ಚಕ್ರದ ಲೈಟ್‍ ಮೋಟಾರು ವಾಹನಗಳಿ ರೂ. 3000/-ದ ವರಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಜೊತೆಗೆ ಅತಿ ವೇಗ ಮತ್ತು ಅಜಾಗುರಕತೆಯಿಂದ ವಾಹನ ಚಲಾಯಿಸುವವರ ವಿರದ್ದು ಪ್ರಕರಣ ದಾಖಲಿಸುವ ಮತ್ತು ವಾಹನಗಳನ್ನು ಸೀಜ್‍ ಮಾಡುವ ಅವಕಾಶ ವಿರುವುದಾಗಿ ತಿಳಿಸಿದರು. ಅಪ್ರಾಪ್ತರಿಗೆ ವಾಹನ ಚಲಾವಣೆಗೆ ನೀಡುವುದು ಮತ್ತು ಸರಿಯಾದ ದಾಖಲಾತಿ ಇಲ್ಲದೇ ವಾಹನ ಚಲಾಯಿಸುವುದು ಸಹ ಅಪರಾಧವಾಗಿದೆ ಎಂದು ತಿಳಿಸಿದರು.

ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಅಪ್ರಾಪ್ತರು ವಾಹನ ಚಲಾಯಿಸುವುದು ಅಪರಾಧ ಮತ್ತು ಇಂತಹ ಅಪರಾದಗಳನ್ನು ತಡೆಯಲು ಶಾಲಾ ಕಾಲೇಜು ಆಡಳಿತ ಮಂಡಳಿ, ಪಾಲಕು-ಪೋಶಕರು ಕೈಜೋಡಿಸಬೇಕು. ಇದು ಬರಿ ಪೊಲೀಸರ ಕೆಲಸವಲ್ಲ ಎಂದುತಿಳಿಸಿದರು.

ಇಂದು ನಗರದಲ್ಲಿ ನೆಡೆದ ತಪಾಸಣಾ ಸಮಯದಲ್ಲಿ 100ಕ್ಕೂ ಹೆಚ್ಚು ಮೊಬೈಲ ಬಳಕೆಯ ಪ್ರಕರಣಗಳು ಮತ್ತು 30ಕ್ಕೂ ಹೆಚ್ಚು ಅತಿ ವೇಗ/ಅಜಾಗುರುಕತೆಯಿಂದ ವಾಹನ ಚಲಾಯಿಸಿದ ಪ್ರಕರಣಗಳನ್ನು ದಾಖಲಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments