ಆಧಾರ್ ಕಾರ್ಡ್ ಭಾರತೀಯರಿಗೆ ಒಂದು ಪ್ರಮುಖ ಗುರುತಿನ ದಾಖಲೆಯಾಗಿದೆ. ಇದನ್ನು ಬ್ಯಾಂಕ್ ಖಾತೆ ತೆರೆಯುವುದು, ಸಿಮ್ ಕಾರ್ಡ್ ಪಡೆಯುವುದು ಮತ್ತು ಕಾಲೇಜು ಮತ್ತು ಶಾಲೆಯಲ್ಲಿ ಪ್ರವೇಶ ಪಡೆಯುವುದು ಹೀಗೆ ಮುಂತಾದ ಅನೇಕ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಇತ್ತೀಚೆಗೆ ಸರ್ಕಾರವು 10 ವರ್ಷಗಳ ಹಳೆಯ ಆಧಾರ್ ಕಾರ್ಡ್ಗಳನ್ನು ನವೀಕರಿಸಲು ಉಚಿತ ಸೇವೆಯನ್ನು ಪ್ರಾರಂಭಿಸಿತು. ಇದಕ್ಕಾಗಿ ಕೊನೆಯ ದಿನಾಂಕ ಡಿಸೆಂಬರ್ 14, 2024 ಆಗಿತ್ತು. ಆದರೆ ಮತ್ತೊಮ್ಮೆ ಸರ್ಕಾರವು ನವೀಕರಿಸಿದ ದಿನಾಂಕವನ್ನು ವಿಸ್ತರಿಸಿದೆ, ಈಗ ಜನರು ತಮ್ಮ ಆಧಾರ್ ಕಾರ್ಡ್ ಅನ್ನು 14 ಜೂನ್ 2025 ರವರೆಗೆ ನವೀಕರಿಸಬಹುದು.
ನಿಮ್ಮ ಎಲ್ಲಾ ರೀತಿಯ ಗುರುತು ಮತ್ತು ಪರಿಶೀಲನೆಗೆ ಆಧಾರ್ ಬಳಕೆಯಾಗುತ್ತಿರುವುದರಿಂದ ಈ ಆಧಾರ್ ಮಾನ್ಯವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಕನಿಷ್ಠ 10 ವರ್ಷಗಳಿಗೊಮ್ಮೆ ಆಧಾರ್ ಅನ್ನು ನವೀಕರಿಸಬೇಕು ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಈಗಾಗಲೆ ತಿಳಿಸಿದೆ.
ನೀವು ಆನ್ಲೈನ್ನಲ್ಲಿ ಹುಟ್ಟಿದ ದಿನಾಂಕ, ವಿಳಾಸ ಹಾಗು ಇತರೆ ವಿವರಗಳನ್ನು ನವೀಕರಿಸುವುದು. ಒಂದು ವೇಳೆ ನೀವು ಬಯೋಮೆಟ್ರಿಕ್ ಮಾಹಿತಿಯನ್ನು (ಬೆರಳಚ್ಚು, ಐರಿಸ್ ಅಥವಾ ಫೋಟೋ) ನವೀಕರಿಸಬೇಕಾದರೆ, ಅದನ್ನು ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಮಾತ್ರ ಮಾಡಬಹುದು. ದಯವಿಟ್ಟು ಗಮನಿಸಿ, ಬಯೋಮೆಟ್ರಿಕ್ ಡೇಟಾವನ್ನು ನವೀಕರಿಸಲು ಶುಲ್ಕವಿರುತ್ತದೆ. ಅಲ್ಲದೇ, ನಿಮ್ಮ ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ ನಿಮ್ಮ ವಿವರಗಳನ್ನು ನವೀಕರಿಸಬಹುದು.