3
ದೇಶದಲ್ಲಿ ಮತ್ತೊಂದು ರೈಲು ಅವಘಡ ಸಂಭವಿಸಿದೆ. ತೆಲಂಗಾಣದ ಪೆದಂಪಳ್ಳಿಯಲ್ಲಿ ಗೂಡ್ಸ್ ರೈಲು ಹಳಿ ತಪ್ಪಿದೆ. ರಾಘವಾಪುರಂ ಹಾಗೂ ರಾಮಗುಂಡಂ ಪ್ರದೇಶದ ನಡುವೆ ಅಪಘಾತ ಸಂಭವಿಸಿದೆ.
ಮಂಗಳವಾರ ರಾತ್ರಿ 10 ಗಂಟೆ ವೇಳೆಗೆ ದುರಂತ ನಡೆದಿದೆ. ಗುಡ್ಸ್ ರೈಲಿನಲ್ಲಿದ್ದ 44 ಬೋಗಿಗಳ ಪೈಕಿ 11 ಬೋಗಿಗಳು ಹಳಿ ತಪ್ಪಿದ್ದು, ಸ್ಥಳಕ್ಕೆ ಹಿರಿಯ ಅಧಿಕಾರಿಗಳು ದೌಡಯಿಸಿ ಪರಿಶೀಲನೆ ನಡೆಸಿದ್ದಾರೆ. ಹಳಿ ತಪ್ಪಿದ 11 ಬೋಗಿಗಳು ಮಗುಚಿ ಬಿದ್ದಿದ್ದು, ಆ ಭಾಗದಲ್ಲಿ ಸಂಚರಿಸುವ 37ಕ್ಕೂ ಹೆಚ್ಚು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.