Home » News » ತಿಮ್ಮಕ್ಕನವರ ಜೀವನ ಮತ್ತು ಪರಿಸರ ಪ್ರೀತಿ ಎಲ್ಲರಿಗೂ ಸ್ಫೂರ್ತಿ: ವೀಣಾ ಜಾಧವ…!

ತಿಮ್ಮಕ್ಕನವರ ಜೀವನ ಮತ್ತು ಪರಿಸರ ಪ್ರೀತಿ ಎಲ್ಲರಿಗೂ ಸ್ಫೂರ್ತಿ: ವೀಣಾ ಜಾಧವ…!

by CityXPress
0 comments

ಲಕ್ಷ್ಮೇಶ್ವರ: ಸಾಲುಮರದ ತಿಮ್ಮಕ್ಕ ಅವರು ಕರ್ನಾಟಕದ ಹೆಮ್ಮೆಯ ಪರಿಸರವಾದಿ, ಪ್ರಕೃತಿಯ ಮೇಲಿನ ಅವರ ನಿಸ್ವಾರ್ಥ ಪ್ರೀತಿ ಮತ್ತು ಪರಿಸರ ಸಂರಕ್ಷಣೆಯ ಕಾರ್ಯವು ಇಂದು ಅವರನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ ಮಕ್ಕಳಿಲ್ಲದಿದ್ದರೂ ಮರಗಳನ್ನೇ ಮಕ್ಕಳಂತೆ ಪ್ರೀತಿಸಿದ “ತಿಮ್ಮಕ್ಕನವರ ಜೀವನವು ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ರಾಮಗೇರಿಯ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ವೀಣಾ ಜಾಧವ ಅಭಿಪ್ರಾಯಪಟ್ಟರು.

ವರದಿ : ಪರಮೇಶ ಎಸ್ ಲಮಾಣಿ.

ಪಟ್ಟಣದ ರಾಜರಾಜೇಶ್ವರಿ ಮಹಿಳಾ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಜರುಗಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ನುಡಿನಮನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ತಿಮ್ಮಕ್ಕನವರ ಜೀವನ ಮತ್ತು ಪರಿಸರ ಪ್ರೀತಿ ಎಲ್ಲರಿಗೂ ಸ್ಫೂರ್ತಿ ಮತ್ತು ಮಾದರಿಯಾಗಿದೆ ಎಂದರು.

ವಿಶೇಷ ಗಮನ ಸೆಳದ ತಿಮ್ಮಕ್ಕನ ವೇಷ ಭೂಷಣ :*

banner

ನುಡಿನಮನ ಕಾರ್ಯಕ್ರಮದಲ್ಲಿ ತಾಲೂಕು ಕದಳಿ ವೇದಿಕೆ ಅಧ್ಯಕ್ಷೆ ನಿರ್ಮಲಾ ಅರಳಿ ಸಾಲುಮರದ ತಿಮ್ಮಕ್ಕನ ವೇಷ ಭೂಷಣ ಧರಿಸಿ ತಿಮ್ಮಕ್ಕನ ಪರಿಸರ ಪ್ರೀತಿ, ಸಂರಕ್ಷಣೆ ಮತ್ತು ಜಾಗೃತಿಯ ಸಂದೇಶವನ್ನು ಸಭೆಗೆ ತಿಳಿಸುವ ಮೂಲಕ ಎಲ್ಲರ ಗಮನ ಸೆಳೆದರು.

ಕಾರ್ಯಕ್ರಮದ ಅಧ್ಯಕ್ಷತೆ ಪಾರ್ವತಿ ಉಪನಾಳವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಶಕುಂತಲಾ ತಟ್ಟಿ, ಕುಸುಮಾ ಮಲ್ಲಾಡದ, ಸರೋಜಾ ಬನ್ನೂರ ಆಗಮಿಸಿದ್ದರು
ಕಾರ್ಯಕ್ರಮದಲ್ಲಿ ವೇದಿಕೆ ಅಧ್ಯಕ್ಷೆ ಸಾಹಿತಿ ಲಲಿತಾ ಕೆರಿಮನಿ, ಪ್ರತಿಮಾ ಮಹಾಜನಶೆಟ್ಟರ,ಕಾಂಚನಮಲಾ ಹಸರೆಡ್ಡಿ, ನಿರ್ಮಲಾ ಅರಳಿ, ದೇವಕ್ಕ ಕೊಡ್ಲಿವಾಡ, ಅಶ್ವಿನಿ ಅಂಕಲಕೋಟಿ, ರತ್ನಾ ಕರ್ಕಿ, ಜಯಶ್ರೀ ಮತ್ತಿಕಟ್ಟಿ, ಶಶಿಕಲಾ ವಡಕಣ್ಣವರ ಮತ್ತಿತರರು.

ಸರೋಜಾ ಲಮಾಣಿ, ಅಮೃತಾ ಗುಡಗೇರಿ ಮತ್ತು ನಂದಿತಾ ಮಾಳವಾಡ ಕಾರ್ಯಕ್ರಮ ನಿರ್ವಹಿಸಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb