ಮಂಡರಗಿ | ಗದಗ ಜಿಲ್ಲೆ
ಮಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾರಿ ಹಾಗೂ ಟಿಪ್ಪರ್‌ಗಳಲ್ಲಿ ಅಳವಡಿಸಿದ್ದ ಬ್ಯಾಟರಿ ಮತ್ತು ಸ್ಟೇಪ್ನಿ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಗದಗ ಜಿಲ್ಲಾ ಮುಂಡರಗಿ ಪೊಲೀಸರು ಯಶಸ್ವಿಯಾಗಿದ್ದಾರೆ. 2025ರ ಡಿಸೆಂಬರ್ ತಿಂಗಳಲ್ಲಿ ಡಂಬಳ ಗ್ರಾಮದ ಬಸ್ ನಿಲ್ದಾಣ ಹಾಗೂ ಮಠದ ಮುಂದೆ ಬಯಲು ಜಾಗೆಯಲ್ಲಿ ನಿಲ್ಲಿಸಿದ್ದ ವಾಹನಗಳಿಂದ ಬ್ಯಾಟರಿ–ಸ್ಟೆಪ್ಪಿ ಕಳ್ಳತನವಾಗಿರುವ ಕುರಿತು ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳ ಪತ್ತೆಗಾಗಿ ಪೊಲೀಸರು ವಿಶೇಷ ತನಿಖೆ ಆರಂಭಿಸಿದ್ದರು.
ವರದಿ:ಮಹಲಿಂಗೇಶ ಹಿರೇಮಠ. ಗದಗ
ಕಳ್ಳತನ ಪ್ರಕರಣಗಳ ಭೇದನೆಗಾಗಿ ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರೋಹನ್ ಜಗದೀಶ ಅವರ ನಿರ್ದೇಶನದಂತೆ ವಿಶೇಷ ತಂಡವನ್ನು ರಚಿಸಲಾಯಿತು. ನರಗುಂದ ಉಪವಿಭಾಗದ ಡಿವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ ಅವರ ಮಾರ್ಗದರ್ಶನದಲ್ಲಿ ಮಂಡರಗಿ ಪೊಲೀಸ್ ಇನ್‌ಸ್ಪೆಕ್ಟರ್ ಯಶವಂತ ಹ. ಬಿಸನಳ್ಳಿ ಹಾಗೂ ಅಪರಾಧ ವಿಭಾಗದ ಪಿಎಸ್‌ಐ ಬಿ.ಎನ್. ಯಳವತ್ತಿ ನೇತೃತ್ವದಲ್ಲಿ ತಂಡ ಕಾರ್ಯಾಚರಣೆ ನಡೆಸಿತು.
ದಿನಾಂಕ 16.02.2026ರಂದು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಅವರು ಡಂಬಳ, ಕದಾಂಪೂರ, ಮೇವುಂಡಿ, ಬರದೂರ, ಮಂಡರಗಿ ವೆಂಕಟಾಪೂರ, ಜಂತ್ಲಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನಿಲ್ಲಿಸಿದ್ದ ವಾಹನಗಳಿಂದ ಬ್ಯಾಟರಿ ಹಾಗೂ ಸ್ಟೆಪ್ಪಿ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಬಂಧಿತ ಆರೋಪಿಗಳು:
ಸುನೀಲ ತಂದೆ ರಮೇಶ ಭಾವಳ್ಳಿ (25), ಅಳವಂಡಿ
ಕನಕಪ್ಪ ತಂದೆ ಶಂಕ್ರಪ್ಪ ಬಚನಳ್ಳಿ (22), ರಘುನಾಥನಹಳ್ಳಿ
ಅಂದಪ್ಪ ತಂದೆ ನಿಂಗಪ್ಪ ಬಿಸನಳ್ಳಿ (29), ಕವಲೂರ ರಸ್ತೆ
ಪ್ರವೀಣ ತಂದೆ ಭರಮಪ್ಪ ಪೂಜಾರ (28), ರಘುನಾಥನಹಳ್ಳಿ
ಆರೋಪಿಗಳಿಂದ ಸುಮಾರು ₹3.60 ಲಕ್ಷ ಮೌಲ್ಯದ EXIDE DRIVE ಕಂಪನಿಯ 40 ಬ್ಯಾಟರಿಗಳು, ₹10 ಸಾವಿರ ಮೌಲ್ಯದ ಒಂದು ಸ್ಟೆಪ್ನಿ ಸೇರಿದಂತೆ ಒಟ್ಟು ₹3.70 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಕಳ್ಳತನಕ್ಕೆ ಬಳಸಿದ್ದ ಬೊಲೇರೋ ವಾಹನ (ಕೆಎ–35/ಎಎ–1284) ಅನ್ನು ಕೂಡ ಜಪ್ತಿ ಮಾಡಲಾಗಿದ್ದು, ಅದರ ಅಂದಾಜು ಮೌಲ್ಯ ₹2 ಲಕ್ಷವಾಗಿದೆ. ಒಟ್ಟು ವಶಪಡಿಸಿಕೊಂಡ ಆಸ್ತಿಯ ಮೌಲ್ಯ ಸುಮಾರು ₹5.70 ಲಕ್ಷವಾಗಿದೆ.
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ಸಿಬ್ಬಂದಿಗಳಾದ ಎಎಸ್‌ಐ ಎಸ್.ಎಂ. ಹಡಪದ, ಜೆ.ಐ. ಬಚ್ಚೇರಿ, ಲಕ್ಷ್ಮಣ ಲಮಾಣಿ, ಸುರೇಶ ದೊಣ್ಣೆ, ಹೇಮಂತ ಹಂಚಿನಾಳ, ಬಾಬಾಜಾನ್ ಕಮ್ಮಾರ, ವಿರೇಶ ಬಿಸನಳ್ಳಿ, ವಿನಾಯಕ ಬಾಲರಡ್ಡಿ, ನಾಗರಾಜ ಹರಪನಹಳ್ಳಿ, ಶರಣಪ್ಪ ಓನಜಹಳ್ಳಿ, ಬಸವರಾಜ ಬಣಕಾರ, ಮುಕ್ಕಣ್ಣ ಪೂಜಾರ ಸೇರಿದಂತೆ ಇತರ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಸೂಕ್ತ ಬಹುಮಾನ ಘೋಷಿಸಿದ್ದಾರೆ.
ಸದ್ಯ ಪ್ರಕರಣದ ತನಿಖೆ ಮುಂದುವರಿದಿದ್ದು, ಇಂತಹ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
