ಲಕ್ಷ್ಮೇಶ್ವರ : ತಾಲೂಕಿನ ಮುನಿಯಾನತಾಂಡಾಯಿಂದ ಉಂಡೇನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯು ಸಂಪೂರ್ಣ ಹಾಳಾಗಿದ್ದು, ವಾಹಾನ ಸವಾರರು ಓಡಾಡಲು ಹರಸಹಾಸ ಪಡುತ್ತಿದ್ದಾರೆ.
ಮುಯಿಯಾನ ತಾಂಡಾದಿಂದ ಉಂಡೇನಹಳ್ಳಿ, ಸೂರಣಗಿ, ಸೂವರ್ವಣಗಿರಿ, ಯಲ್ಲಾಪೂರ ಗ್ರಾಮಕ್ಕೆ ಸಂಪರ್ಕ ಕಲ್ಲಿಸುವ ರಸ್ತೆಯು ದೊಡ್ಡೂರು ಗ್ರಾಮ ಪಂಚಾಯತಿ ಗೆ ವ್ಯಾಪ್ತಿಯಲ್ಲಿ ಬರುತ್ತದೆ. ಸಂಭವಿಸಿದ ಅಧಿಕಾರಿಗಳು ಬಂದು ಪರಿಶೀಲಿಸಿ ಹೋಗಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತ ಮುಖಂಡ ಲಕ್ಷ್ಮಣ ಲಮಾಣಿ ಆಕ್ರೋಶ ವ್ಯಕ್ತಪಡಿಸಿದರು.
ವರದಿ : ಪರಮೇಶ ಎಸ್ ಲಮಾಣಿ.
ಮುನಿಯಾನ ತಾಂಡಾ ಮತ್ತು ಉಂಡೇನಹಳ್ಳಿ ಗ್ರಾಮದ ರೈತರು ಈ ರಸ್ತೆ ಗೆ ಅವಲಂಬನೆಯಾಗಿದ್ದು, ತಮ್ಮ ತಮ್ಮ ಜಮಿನಿಗೆ ಹೊಗುವುದಕ್ಕೆ ಮತ್ತು ಹೊಲದಿಂದ ಫಸಲನ್ನು ತರಲು ಹರಸಹಾಸ ಪಡಬೇಕಾಗಿದೆ.
ಮಹದೇವಪ್ಪ ಸಕ್ರಪ್ಪ ಲಮಾಣಿ ಇವರ ಹೊಲದಿಂದ ನೀಲಪ್ಪ ದೇವಪ್ಪ ಲಮಾಣಿ ಹೊಲದವರಿಗೆ ರಸ್ತೆ ಅಭಿವೃದ್ಧಿಪಡಿಸುವುದು ಎಂಬ ಶಿರ್ಷಿಕೆಯಡಿ ಕಾಮಗಾರಿ ಕ್ರಿಯಾಯೋಜನೆ ಆಗಿರುತ್ತದೆ.
ಮತ್ತು ಭಾರತೀಯ ಕಿಸಾನ್ ಸಂಘ ತಾಲೂಕು ಪಂಚಾಯತಿಗೆ ಮನವಿ ಕೊಟ್ಟಿರುತ್ತೇವೆ.
ಸದಸ್ಯರಗೆ ರೈತರ ಬಂದು ಮನವಿ ಮಾಡಿಕೊಂಡಿದ್ದರಿಂದ ನಾವು 15 ನೇ ಹಣಕಾಸಿನಲ್ಲಿ ಕ್ರಿಯಾ ಯೋಜನೆ ಮಾಡಲಾಗಿದೆ. ಅನುಮೋದನೆಯಾಗಿ ಬಂದಿದೆ ಆದರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ನಿರ್ಲಕ್ಷರಿಂದ ಗ್ರಾಮಗಾರಿ ವಿಳಂಬ ಆಗಿದೆ ಎಂದು ಲಕ್ಷ್ಮಣ ಲಮಾಣಿ ಆರೋಪಿಸಿದರು.
ಕೋಟ್ :
ನಾನು ಗ್ರಾಮ ಪಂಚಾಯತಿಯಿಂದ ತಾಲೂಕ ಪಂಚಾಯಿತಿಗೆ ಕ್ರೀಯಾ ಯೋಜನೆ ಮಾಡಿ ಸಲ್ಲಿಸಿದ್ದೆನೆ. ಅಧಿಕಾರಿಗಳು ರಸ್ತೆ ಪರಿಶೀಲನೆ ಮಾಡಿ ಹೋಗಿದ್ದಾರೆ. ಆದರೆ ಇನ್ನುತನಕ ಯಾವುದೇ ಪ್ರಯೋಜನೆ ಆಗಿಲ್ಲ.
– ಇಂದ್ರವ್ವ ಲಕ್ಷ್ಮಣ ಲಮಾಣಿ.
ಸದಸ್ಯರು, ಗ್ರಾಮ ಪಂಚಾಯತಿ ದೊಡ್ಡೂರು.
ಕೋಟ್ :
ನಾನೇ ಖುದ್ದಾಗಿ ನಿಂತು ಸ್ವಂತ ಖರ್ಚಿನಲ್ಲಿ ಗುಂಡಿಗಳನ್ನು ಮುಚ್ಚಿದ್ದೆನೆ. ಕಳೆದ ಬೇಸಿಗೆಯಲ್ಲಿ ಜೆ ಸಿ ಬಿ ಯಿಂದ ಗುಂಡಿಗಳನ್ನು ಮುಚ್ಚಿದ್ದೆವೆ. ಮಳೆಯಿಂದಾಗಿ ಮತ್ತೆ ಗುಂಡಿಗಳು ಬಿದ್ದು ಕೆಸರುಮಯವಾಗಿವೆ. ಅಧಿಕಾರಿಗಳು ಆದಷ್ಟು ಬೇಗ ರಸ್ತೆ ಸರಿಪಡಿಸಬೇಕು.
ಲಕ್ಷ್ಮಣ ಡಿ ಲಮಾಣಿ.
ಮುನಿಯಾನ ತಾಂಡಾ ನಿವಾಸಿ.
