ಲಕ್ಷ್ಮೇಶ್ವರ: ತಾಲೂಕಿಗೆ ನೂತನವಾಗಿ ಬಂದ ತಹಶಿಲ್ದಾರರಿಗೆ ಆನಂದ ಗಡ್ಡದೇವರಮಠ ಅಭಿಮಾನಿ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ಲಕ್ಷ್ಮೇಶ್ವರ ಸುದ್ದಿ: ಪರಮೇಶ ಲಮಾಣಿ..
ಈ ವೇಳೆ ಮಾತನಾಡಿದ ಯುವ ಮುಖಂಡ ವಿರುಪಾಕ್ಷ ನಂದೇಣ್ಣವರ್, ನೂತನವಾಗಿ ತಹಶಿಲ್ದಾರರಾಗಿ ನಮ್ಮ ತಾಲೂಕಿಗೆ ಬಂದಂತ ಧನಂಜಯ ರವರು ಉತ್ತಮ ಕೆಲಸಗಾರರು, ಅವರು ಕಾರ್ಯ ನಿರ್ವಹಿಸಿದಂತ ತಾಲೂಕುಗಳಲ್ಲಿ ಉತ್ತಮ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ತಾಲೂಕಿನ ಶ್ರೆಯೋಭಿವೃದ್ಧಿಗೆ ಸೇವೆ ಸಲ್ಲಿಸುವ ಯುವ ಉತ್ಸಾಹಿಯಾಗಿದ್ದಾರೆ. ಅವರ ಕಡೆಯಿಂದ ಉತ್ತಮ ಸೇವೆಯ ನೀರಿಕ್ಷೆಯಲ್ಲಿ ತಾಲೂಕಿನ ಜನತೆ ಇದ್ದಾರೆ ಎಂದರು.
ನಂತರ ಮಾತನಾಡಿದ ತಹಶಿಲ್ದಾರ ಧನಂಜಯ ರವರು ಲಕ್ಷ್ಮೇಶ್ವರ ತಾಲೂಕಿನ ರೈತರ, ಬಡವರ ಪರವಾಗಿ ಕೆಲಸ ಮಾಡುತ್ತೆನೆ. ಜನ ಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವ ಕಾರ್ಯ ನಮ್ಮ ಇಲಾಖೆಯಿಂದ ಆಗುತ್ತದೆ. ಸರ್ಕಾರ ನೀಡುವಂತಹ ಯೋಜನೆಗಳನ್ನು ಜನರಿಗೆ ತಲುಪಿಸುವ ಮತ್ತು ಕೆಲಸ ಮಾಡಿಕೊಡುವ ಜವಾಬ್ದಾರಿ ನಮ್ಮ ಇಲಾಖೆ ಹೊಂದಿದೆ. ತಾಲೂಕಿನ ಎಲ್ಲಾ ಜನರ ಸಹಕಾರದೊಂದಿಗೆ ಉತ್ತಮ ಸೇವೆ ಸಲ್ಲಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ವಿರುಪಾಕ್ಷ ನಂದೇಣ್ಣವರ್, ಮಾಬುಸಾಬ ಆದ್ರಳ್ಳಿ, ಆನಂದ ಕೊಳ್ಳಿ, ಸಂಜೀವ ಪೋತರಾಜ, ಪ್ರಕಾಶ ಕೊಂಚಿಗೇರಿಮಠ,ಶರಣಪ್ಪ ರಗಟಿ, ಶಿವಣ್ಣ ಮಾನ್ವಿ, ಕೀರಣ ನವಲೆ, ಎಂ.ಎಫ್.ನಧಾಫ್, ಸಿದ್ದಲಿಂಗ ರಗಟಿ, ಮಂಜುನಾಥ ಇಮಡಿ, ಭರಮರೇಡ್ಡಿ ಗೋವಣ್ಣವರ್ ಮತ್ತಿತರಿದ್ದರು.