ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿ ಗೆಲುವು ಸಾಧಿಸಿದೆ.ಆದರೆ ಈವರೆಗೂ ಮುಖ್ಯಮಂತ್ರಿ ಯಾರಾಗ್ತಾರೆ? ಅನ್ನೋ ಚರ್ಚೆ ವ್ಯಾಪಕವಾಗಿತ್ತು. ಅಂತೂ ಇಂತು ಕೊನೆಗೂ ಬಿಜೆಪಿ ಕೋರ್ ಕಮೀಟಿ ಮುಖ್ಯಮಂತ್ರಿ ಹೆಸರನ್ನ ಫೈನಲ್ ಮಾಡಿದೆ.
ಹೌದು,ಬುಧವಾರ ನಡೆದ ಸಭೆಯಲ್ಲಿ ದೇವೇಂದ್ರ ಫಡ್ನವೀಸ್ ಅವರ ಹೆಸರನ್ನು ಬಿಜೆಪಿಯ ಕೋರ್ ಕಮಿಟಿ ಅಂತಿಮಗೊಳಿಸಿದೆ. ಮತ್ತೇ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ಸಿಎಂ ಆಗಿ ಮರಳಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಸಭೆಯಲ್ಲಿ ಮಹಾರಾಷ್ಟ್ರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಫಡ್ನವೀಸ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎನ್ನಲಾಗಿದ್ದು ಡಿಸೆಂಬರ್ 5 ರಂದು (ಗುರುವಾರ) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.