ಗಜೇಂದ್ರಗಡ: ಕಳೆದ ಹಲವಾರು ದಿನಗಳಿಂದ ಗ್ರಾಮೀಣ ಪ್ರದೇಶದ ಜನರಲ್ಲಿ ಆತಂಕ ತಂದೊಡ್ಡಿದ್ದ ಚಿರತೆಯನ್ನ ಬೋನಿಗೆ ಬೀಳಿಸುವಲ್ಲಿ
ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಹೌದು, ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ವದೆಗೋಳ ಗ್ರಾಮದ ತೋಟದಲ್ಲಿ ಇಟ್ಟಿದ್ದ ಬೋನಿಗೆ ಚಿರತೆ ಸೆರೆಯಾಗಿದೆ.
ಸುತ್ತಮುತ್ತಲಿನ ಗ್ರಾಮಗಳಾದ ಕುಂಟೋಜಿ, ವದೆಗೋಳ ಗ್ರಾಮಗಳ ವ್ಯಾಪ್ತಿಯ ಜನರಲ್ಲಿ ಚಿರತೆ ಓಡಾಟ ಭಯದ ವಾತಾವರಣ ನಿರ್ಮಿಸಿತ್ತು. ಇದಿರಿಂದಾಗಿ ಜಮೀನುಗಳಿಗೆ ತೆರಳಲು ಗ್ರಾಮಸ್ಥರು ಭಯ ಪಡ್ತಿದ್ದರು.ಇದೀಗ ಚಿರತೆ ಬೋನಿಗೆ ಬಿದ್ದಿದ್ದರಿಂದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
ಅರಣ್ಯ ಇಲಾಖೆ ಕಾರ್ಯಕ್ಕೆ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.