ಮನುಷ್ಯನಿಗೆ ಮನರಂಜನೆ ಎನ್ನುವದು ಅವಶ್ಯ ಹಾಗೂ ಅನಿವಾರ್ಯ. ಆದರೆ ಅದೇ ಮನರಂಜನೆ, ಹಠವಾಗಿ ಚಟ ಆದರೆ ಬಹಳ ಕಷ್ಟ. ಹೀಗೆ ಇದಕ್ಕೆ ಸಾಕ್ಷಿ ಎನ್ನುವಂತೆ ಮದುವೆ ಮಂಟಪದಲ್ಲಿ ಕುಳಿತ ಮದುಮಗನೊಬ್ಬ, ತನ್ನ ಗೆಳೆಯರೊಂದಿಗೆ ಮೊಬೈಲ್‌ನಲ್ಲಿ ಲುಡೋ ಗೇಮ್ ಆಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಈ ಚಿತ್ರವನ್ನು ಪೋಸ್ಟ್ ಮಾಡುತ್ತಾ, ಒಬ್ಬ X ಬಳಕೆದಾರರು “ಸಹೋದರನಿಗೆ ತನ್ನದೇ ಆದ ಆದ್ಯತೆಗಳಿವೆ,” ಎಂದು ಕಾಮೆಂಟ್ ಮಾಡಿದರೆ. ಮತ್ತೊಬ್ಬರು, “ಮಂಟಪಕ್ಕೆ ವಧುವಿನ ಆಗಮನವಾದಂತೆ ಕಾಣುತ್ತಿಲ್ಲ,” ಎಂದು ಬರೆದಿದ್ದಾರೆ. “ಮದುವೆ ಮುಂದುವರಿಯುತ್ತದೆ. ಆದರೆ, ಲುಡೋ ಅಗತ್ಯವಿದೆ,” ಎಂದು ಮತ್ತೊಬ್ಬರು ಫೋಟೋಗೆ ಕಾಮೆಂಟ್ ಮಾಡಿದ್ದಾರೆ.