ಮುಂಡರಗಿ: ಇಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಸಂತ ಸೇವಾಲಾಲರ ಜಯಂತೋತ್ಸವವನ್ನು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ಹಾಕುವ ಮೂಲಕ ಆಚರಿಸಲಾಯಿತು.
ಈ ವೇಳೆ ಮಾತನಾಡಿದ, ಹಿಂದುಳಿದ ವರ್ಗಗಳ ಸಹಾಯಕ ನಿರ್ದೇಶಕರಾದ ಎಸ್ ವಿ ಕಲ್ಮಠ ರವರು, ನಾಲ್ಕನೇ ಶತಮಾನದಲ್ಲಿ ಆಗಿ ಹೋಗಿರುವ ಮಹಾನ್ ಸಂತರಲ್ಲಿ ಸಂತ ಸೇವಾಲಾಲರೂ ಒಬ್ಬ ಶ್ರೇಷ್ಠ ದಾರ್ಶನಿಕರಾಗಿ ಅತ್ಯಂತ ಜ್ಞಾನಿಗಳಾಗಿ ಬಾಳಿದವರು.

ಲಂಬಾಣಿ ಸಮುದಾಯದಲ್ಲಿ ಜನಿಸಿ ಅಜ್ಞಾನ ಕಳೆದು ಸುಜ್ಞಾನ ಬೆಳಗುವ ಮೂಲಕ, ಅದಿವಾಸಿ ಜನಾಂಗವನ್ನು ಸುವಿಚಾರದ ಮೂಲಕ ಈ ಜಗತ್ತು ಮತ್ತು ನಾಡನ್ನು ಅಜ್ಞಾನದಿಂದ ಮುಕ್ತಗೊಳಿಸಿದ ಧೀಮಂತ ಸಂತರು ಸೇವಾಲಾಲರು ಎಂದು ಸೇವಾಲಾಲ್ ರ ಜೀವನ ಚರಿತ್ರೆ ಕುರಿತು ಹಾಗೂ ಅವರ ಆದರ್ಶಗಳ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.