ಬೆಂಗಳೂರು: ನಟ ದರ್ಶನ್ ಗೆ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ. ಹೌದು, ಜಾಮೀನು ಪಡೆದು ನಿರಾಳರಾಗಿದ್ದ ನಟ ದರ್ಶನ್‌ಗೆ ರಾಜ್ಯ ಸರ್ಕಾರ ಹೈಕೋರ್ಟ್ ಜಾಮೀನು ಆದೇಶ ರದ್ದು ಕೋರಿ ಸುಪ್ರೀಂ ಕೋರ್ಟ್‌ಗೆ ಹೋಗಲು ಒಪ್ಪಿಗೆ ಕೊಟ್ಟಿದೆ.
ಇಬ್ಬರು ವಕೀಲರನ್ನು ನೇಮಿಸಿ ಜಾಮೀನು ಬಗ್ಗೆ ಮೇಲ್ಮನವಿ ಸಲ್ಲಿಸಲು ಗೃಹ ಇಲಾಖೆ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಸರ್ಕಾರದಿಂದ ವಕೀಲರಾದ ಅನಿಲ್ ಸಿ ನಿಶಾನಿ ಹಾಗೂ ಸಿದ್ಧಾರ್ಥ್ ಲೂದ್ರಾ ಅವರನ್ನು ನೇಮಿಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.