ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಗದಗ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಬಂಜಾರಾ ಸಮಾಜದ ಮಹಿಳೆಯರು ಕಟ್ಟಿಗೆ ಮತ್ತು ಹುಲ್ಲನ್ನು ಮಾರುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗದಗ ಸುದ್ದಿ: ಪರಮೇಶ ಎಸ್ ಲಮಾಣಿ
ನಾಲ್ಕನೇ ದಿನಕ್ಕೆ ಕಾಲಿಟ್ಟ ಜಿಲ್ಲೆಯ ಅನಿರ್ಧಿಷ್ಟಾವಧಿ ಧರಣಿ ಹೋರಾಟದಲ್ಲಿ ಪಾಪನಾಸಿ, ಕಕ್ಕೂರ, ವರವಿ, ಹರದಗಟ್ಟಿ, ಬೈರಾಪುರ, ಶಿರೋಳ ತಾಂಡಾದ ಜನರು ಭಾಗಿಯಾದ್ದರು.
ಉದ್ದೇಶಿಸಿ ಮಾತನಾಡಿದ ಹಕ್ಕು ಸಂರಕ್ಷಣಾ ಸಮೀತಿಯ ರಾಜ್ಯ ಕಾರ್ಯದರ್ಶಿ ರವಿಕಾಂತ ಅಂಗಡಿ ಮತ್ತು ಮುಖಂಡ ಪರಮೇಶ ನಾಯಕ ಹಿಂದಿನಿಂದ ಹೊಟ್ಟೆಪಾಡಿಗಾಗಿ ದಟ್ಟ ಅಡವಿ ಬೆಟ್ಟಗುಡ್ಡಗಳಲ್ಲಿ ನೈಸರ್ಗಿಕವಾಗಿ ದೊರೆಯುವ ಹತ್ತಿ, ಹಣ್ಣು, ಕಾವಳೆ ಹಣ್ಣು ಸೇರಿದಂತೆ ಇತರೆ ಹಣ್ಣುಗಳನ್ನು ಹಾಗು ಬಾದಿ ಹುಲ್ಲು, ಹುಲ್ಲು ಕುಲಕಸಬನ್ನಾಗಿ ಮಾರುತ್ತಿದ್ದರು. ಇಗಲು ನಮ್ಮ ಸಮಾಜದ ಪರಿಸ್ಥಿತಿ ಇದೆ ಆಗಿದೆ ಆದರೂ ಸರ್ಕಾರ ಸಮಾಜಕ್ಕೆ ಅನ್ಯಾಯ ಮಾಡಿದೆ. ಮುಂದೆ ನಾವು ಈ ಸರ್ಕಾರಕ್ಕೆ ಪಾಠ ಕಲಿಸುತ್ತೆವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟದಲ್ಲಿ ಬಂಜಾರಾ ಸಮಾಜದ
ಸಾಂಪ್ರಾದಾಯಿಕ ಅಣುಕು ಪ್ರದರ್ಶನ ಮಾಡಲಾಯಿತು ಸಾರ್ವಜನಿರು ಹತ್ತು ರೂ. 20 ಕೊಟ್ಟು ಖರೀದಿ ಮಾಡುತ್ತಿರುವುದು ಕಂಡು ಬಂತು.
ಈ ಸಂದರ್ಭದಲ್ಲಿ ರಾಮಪ್ಪ ನಾಯಕ್ ರಮೇಶ್ ಕಾರಬಾರಿ ನಾರಾಯಣ ಪೂಜಾರ್ ವಸಂತ ನಾಯಕ್ ರಾಜಣ್ಣ ಕಾರಬಾರಿ ಹನುಮಪ್ಪ ಡಾವ
ತಾವರಪ್ಪ ಲಮಾಣಿ ಪರಮೇಶ ಲಮಾಣಿ ಶಂಕರ್ ಕಾರಬಾರ ಧರ್ಮ ಲಮಾಣಿ ಪಾಂಡಪ್ಪ ಲಮಾಣಿ ರಾಮಪ್ಪ ರಾಥೋಡ್ ಹರೀಶ್ ಕುಮಾರ್ ಶಿವಾನಂದ್ ಸೋಮಪ್ಪ ರಾಥೋಡ್ ಠಾಕರಪ್ಪ ರಾಥೋಡ್
ರವಿಕಾಂತ್ ಅಂಗಡಿ ಸುರೇಶ್ ಮಹಾರಾಜ್ ಕೆ ಸಿ ನಬಾ ಪುರ್ ಚಂದು ನಾಯಕ್ ಟಿ ದಿ ಪೂಜಾರ್ ಐ ಎಸ್ ಪೂಜಾರ್ ಧನುರಾಮ್ ತಂಬೂರಿ ಗಣೇಶ ಕಟ್ಟಿಮನಿ ಕೃಷ್ಣ ಲಮಾಣಿ ಭೋಜಪ ಲಮಾಣಿ ತಾಂಡಾದ ಯುವಕರು ಹಾಗೂ ಮುಂತಾದವರು ಭಾಗಿಯಾಗಿದ್ದರು.
