Sunday, April 20, 2025
Homeರಾಜ್ಯಚಾಲಕ‌ನ ನಿಯಂತ್ರಣ ತಪ್ಪಿ ಕಾರ ಪಲ್ಟಿ: ಮೂವರ‌ ಸಾವು!

ಚಾಲಕ‌ನ ನಿಯಂತ್ರಣ ತಪ್ಪಿ ಕಾರ ಪಲ್ಟಿ: ಮೂವರ‌ ಸಾವು!

ವಿಜಯಪುರ: ಅದ್ಯಾಕೋ ಹೊಸ ವರ್ಷದ ಆರಂಭದಲ್ಲಿ ಶುರುವಾದ ಅಪಘಾತಗಳ ಸಂಖ್ಯೆ ನಿಂತಂತೆ ಕಾಣುತ್ತಿಲ್ಲ.

ಎರೆಡು ದಿನಗಳ ಹಿಂದಷ್ಟೇ ಯಲ್ಲಾಪುರ‌ ಹಾಗೂ ಸಿಂಧನೂರ ಸೇರಿದಂತೆ ರೈಲ್ವೇ ಅಪಘಾತಗಳು ಸಂಭವಿಸಿ ಸರಣಿ ಸಾವು ಸಂಭವಿಸಿದ್ದವು. ಆ ಘಟನೆ ಮಾಸುವ ಮುನ್ನವೇ, ವಿಜಯಪುರದಲ್ಲಿ ಕಾರು ಅಪಘಾತ ಸಂಭವಿಸಿ ಮೂವರು ಮೃತಪಟ್ಟಿರುವ ದಾರುಣ ಘಟನೆ ಜರುಗಿದೆ.

ಹೌದು, ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಮೂವರು ಮೃತಪಟ್ಟ ಘಟನೆ ವಿಜಯಪುರ ತಾಲೂಕಿನ ಕನ್ನಾಳ ಕ್ರಾಸ್ ಬಳಿ NH-50 ರಲ್ಲಿ ನಡೆದಿದೆ. ಘಟನೆಯಲ್ಲಿ ಕೆಲವರಿಗೆ ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದಲ್ಲಿ ಮೃತಪಟ್ಟವರನ್ನು ಅಭಿಷೇಕ್ ಸಾವಂತ್ (23), ವಿಜಯಕುಮಾರ್ ಔರಂಗಾಬಾದ್ (24), ರಾಜು ಬಿರಾದಾರ (23) ಎಂದು ಗುರುತಿಸಲಾಗಿದೆ. ರಾಜು ಕಾಂಬಳೆ, ಪೋಳ ಎಂಬವರು ಗಾಯಗೊಂಡಿದ್ದಾರೆ. ಈ ಐವರು ಕಾರಿನಲ್ಲಿ ಸೊಲ್ಲಾಪುರಕ್ಕೆ ಹೋಗಿದ್ದರು. ಅಲ್ಲಿಂದ ಮರಳಿ ಬರುವಾಗ ಅಪಘಾತ ಸಂಭವಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments