ಪಾಟ್ನಾ ಆಸ್ಪತ್ರೆಯಲ್ಲಿ ಶನಿವಾರ ಬೆಳಿಗ್ಗೆ ಸಾವನ್ನಪ್ಪಿದ ವ್ಯಕ್ತಿಯ ಎಡಗಣ್ಣು ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.ಕಣ್ಣು ಕಾಣೆಯಾಗಲು ಕಾರಣ ಆಸ್ಪತ್ರೆ ಸಿಬ್ಬಂದಿ ಎಂದು ಮೃತ ವ್ಯಕ್ತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಫ್ಯಾಂಟಸ್ ಕುಮಾರ್ ಅನ್ನೋ ವ್ಯಕ್ತಿಯನ್ನ ಪಾಟ್ನಾದ ನಳಂದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.ಸಾವಿನ ನಂತರ ಕುಮಾರ್ ಮೃತದೇಹ ಐಸಿಯುನಲ್ಲಿತ್ತು. ರಾತ್ರಿ ಮರಣೋತ್ತರ ಪರೀಕ್ಷೆ ಸಾಧ್ಯವಾಗದ ಕಾರಣ ಮೃತದೇಹವನ್ನ ಐಸಿಯುನಲ್ಲಿ ಇರಿಸಿದ್ದರು. ಈ ವೇಳೆ ಕಣ್ಣು ಕಾಣೆಯಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಆದರೆ ಆಸ್ಪತ್ರೆ ಆಡಳಿತ ಮಂಡಳಿ ಇಲಿ ಕಚ್ಚಿರಬಹುದು ಎಂದು ಉತ್ತರಿಸಿದ್ದಾರೆ. ಈ ಎರಡೂ ಸಂದರ್ಭಗಳಲ್ಲಿ, ಏನೇ ಆಗಿದ್ದರೂ ಇದು ನಮ್ಮದೇ ತಪ್ಪು ಎಂದು ಆಸ್ಪತ್ರೆಯ ಅಡಳಿತ ಮಂಡಳಿ ಒಪ್ಪಿಕೊಂಡಿದ್ದಾರೆ.