ಚಿಕ್ಕಮಗಳೂರು: ಇತ್ತೀಚೆಗೆ ತಂದೆ ತಾಯಿಗಳು ತಮ್ಮ ಮುದ್ದು ಕಂದಮ್ಮನಿಗೆ ನಾಮಕರಣ ಮಾಡೋದು ಅಂದ್ರೆ ದೊಡ್ಡ ಸವಾಲಿನ ಕೆಲಸದಂತೆ ಆಗಿದೆ. ಆದ್ರೆ ಅದನ್ನ ಅಷ್ಟೇ ಪ್ರೀತಿಯಿಂದ ನಿಭಾಯಿಸ್ತಾರೆ ಮಗುವಿನ ಪೋಷಕರು. ಯಾಕಂದ್ರೆ ತಮ್ಮ ಮಗುವಿಗೆ ಹೆಸರು ಹುಡಕೋದೆ ದೊಡ್ಡ ಕೆಲಸವಾಗಿರುತ್ತೆ. ಗಂಡನಿಗೆ ಇಷ್ಟವಾದ ಹೆಸರು ಹೆಂಡತಿಗೆ ಇಷ್ಟವಾಗೋಲ್ಲ. ಹೀಗೆ ಒಬ್ಬರಿಗೊಬ್ಬರು ಹುಡುಕಾಡಿ, ಮಗುವಿಗೆ ಹೆಸರಿಡೋದು ಸಂಭ್ರಮದ ಮಧ್ಯೆ ಒಂದಿಷ್ಟು ಕುತೂಹಲದ ಟೆನ್ಶನ್ ಆಗಿ ಪರಿಚರ್ತನೆಯಾಗುತ್ತೆ.
ಆದರೆ ಇಲ್ಲೊಬ್ಬ ದಂಪತಿಗಳು ತಮ್ಮ ಎರಡನೇ ಮಗುವಿಗೆ ನಮ್ಮ ಕನ್ನಡ ರಾಜ್ಯದ ಹೆಸರಾದ ಕರ್ನಾಟಕ ಎಮದು ನಾಮಕರಣ ಮಾಡಿ ಕನ್ನಡದ ಪ್ರೀತಿಯನ್ನ ತೋರಿಸಿದ್ದಾರೆ. ಚಿಕ್ಕಮಗಳೂರಿನ ಪ್ರೀತೇಶ್ ದಂಪತಿ ತಮ್ಮ ಎರಡನೇ ಮಗನಿಗೆ ಕರ್ನಾಟಕ ಎಂದು ನಾಮಕರಣ ಮಾಡಿದ್ದಾರೆ. ಇದೇ ವೇಳೆ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿ ಪುತ್ರನಿಗೆ ಸಮಾರಂಭಕ್ಕೆ ಆಗಮಿಸಿದ ಅತಿಥಿಗಳಿಗೆ ಅರಿಶಿಣ-ಕುಂಕುಮದ ಜತೆ ಕನ್ನಡದ ಬಾವುಟ ಹಾಗೂ 69ನೇ ಕನ್ನಡ ರಾಜ್ಯೋತ್ಸವದ ನೆನಪಿಗಾಗಿ 69 ಪ್ರಥಮಗಳ ಚಾರ್ಟ್ ನೀಡಿದ್ದಾರೆ. ಪ್ರತಿಯೊಬ್ಬರಿಗೂ ಕನ್ನಡದ ಬಗ್ಗೆ ಅರಿವು ಹಾಗೂ ಅಭಿಮಾನ ಮೂಡಿಸಬೇಕೆಂಬ ಉದ್ದೇಶದಿಂದ ಪ್ರೀತೇಶ್ ದಂಪತಿ ಈ ರೀತಿ ಆಚರಣೆ ಮಾಡಿದ್ದಾರೆ ಎನ್ನಲಾಗಿದೆ.