ವಿಳಾಸ ತಿಳಿಯದ ವಾಹನ ಸವಾರರು ಇವಾಗ ಗೂಗಲ್ ಮ್ಯಾಪ್ ನ ಸಹಾಯ ಬಳಸಿ ತಾವು ತಲುಪಬೇಕಾಗಿರುವ ಸ್ಥಳಕ್ಕೆ ತಲುಪೋದು ಕಾಮನ್ ಆಗಿದೆ. ಆದರೆ ಅದೇ ಗೂಗಲ್ ಮ್ಯಾಪ್ ಸಹಾಯ ಪಡೆದು ವಾಹನ ಸವಾರರು ಪಡಬಾರದ ಫಜೀತಿ ಪಟ್ಟಿದ್ದನ್ನೂ ನೀವು ಕೇಳಿದಿರಿ. ಜೊತೆಗೆ ಇತ್ತೀಚೆಗೆ ಕಾರ್ ನಲ್ಲಿ ಪ್ರಯಾಣಿಸುತ್ತಿದ್ದ ವಾಹನ ಸವಾರರು ಗೂಗಲ್ ಮ್ಯಾಪ್ ಸಹಾಯ ಪಡೆದು ಸೇತುವೆಯಿಂದ ಕೆಳಗೆ ಬಿದ್ದು ಪ್ರಾಣವನ್ನೇ ಕಳೆದುಕೊಂಡಿದ್ದರು.
ಅದೇ ರೀತಿ ಗೂಗಲ್ ಮ್ಯಾಪ್ ತೋರಿಸಿದ ದಾರಿಯಲ್ಲಿ ಹೋಗಿ ವಾಹನ ಸವಾರರು ಫಜೀತಿ ಪಟ್ಟಿರೋ ಘಟನೆ ನಡೆದಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಇಲ್ಲ. ಹೌದು, ಬಿಹಾರ ಕುಟುಂಬವೊಂದು ಗೂಗಲ್ ಮ್ಯಾಪ್ ತೋರಿಸಿದ ದಾರಿಯಲ್ಲಿ ಹೋಗಿ, ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಭೀಮಗಡ ವನ್ಯಧಾಮದ ದಟ್ಟ ಅರಣ್ಯ ಸೇರಿದ ಘಟನೆ ನಡೆದಿದೆ. ಬುಧವಾರ ರಾತ್ರಿ ಅರಣ್ಯದೊಳಗೆ ಕಳೆದ ಈ ಕುಟುಂಬವನ್ನು ಖಾನಾಪುರ ಠಾಣೆ ಪೊಲೀಸರು ಜಿಪಿಎಸ್ ಸಹಾಯದಿಂದ ರಕ್ಷಿಸಿದ್ದಾರೆ. ರಾಜದಾಸ್ ರಣಜಿತ್‌ದಾಸ್ ತಮ್ಮ ಕುಟುಂಬದೊಂದಿಗೆ ಉಜ್ಜಯಿನಿಯಿಂದ ಗೋವಾಗೆ ಪ್ರಯಾಣಿಸುತ್ತಿದ್ದಾಗ ಮುಖ್ಯರಸ್ತೆಯಿಂದ 8 ಕಿಲೋ ಮೀಟರ್ ದಟ್ಟ ಅರಣ್ಯದೊಳಗೆ ಕರೆದೊಯ್ದಿದೆ.ಅದೃಷ್ಟ ವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಹೀಗಾಗಿ ನೀವು ಕೂಡ ಗೂಗಲ್ ಮ್ಯಾಪ್ ನ ಮೂಲಕ ವಿಳಾಸ ಹುಡುಕುವಾಗ ಯಾವುದಕ್ಕೂ ಹುಷಾರ್!