ಗದಗ : ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹವು ಐದನೇ ದಿನಕ್ಕೆ ಕಾಲಿಟ್ಟಿದ್ದು, ತಮ್ಮ ಸಂಪ್ರದಾಯದ ವೃತ್ತಿಗಳ ಕಸಬುಗಳನ್ನು ದಿನಕ್ಕೆ ಒಂದರಂತೆ ಒಂದೊಂದಾಗಿ ಎಳೆ ಎಳೆಯಾಗಿ ತೋರಿಸಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವರದಿ: ಪರಮೇಶ ಎಸ್ ಲಮಾಣಿ
ಐದನೇ ದಿನದ ಹೋರಾಟದಲ್ಲಿ ಹಿಂದಿನ ಕಾಲದಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ದೊರೆಯುವ ಹುಲ್ಲುಕಡ್ಡಿಗಳಿಂದ ತಯಾರಿಸಿದ ಗುಡ್ಡದ ಕಸಬರಗಿ, ಬಂದರಕಿ ಕಸಬರಗಿ ಹಿಡಿದು ಕಿತ್ತೂರ ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಛೇರಿವರೆಗೆ ರಸ್ತೆ ಸ್ವಚ್ಚಗೊಳಿಸುತ್ತಾ ಪಾದಯಾತ್ರೆ ಮಾಡಿ ಬಳಿಕ ಎಂದಿನಂತೆ ಕಛೇರಿ ಎದುರು ಧರಣಿ ಸತ್ಯಾಗ್ರಹ ಕೈಗೊಂಡು ಸರಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
