Home » News » ಬಂಜಾರರ ಸಂಪ್ರಾದಾಯಿಕ ಹಬ್ಬ ದೀಪಾವಳಿ(ದವಾಳಿ) ಹಬ್ಬ ಆಚರಣೆಯ ಹಿನ್ನೆಲೆ….

ಬಂಜಾರರ ಸಂಪ್ರಾದಾಯಿಕ ಹಬ್ಬ ದೀಪಾವಳಿ(ದವಾಳಿ) ಹಬ್ಬ ಆಚರಣೆಯ ಹಿನ್ನೆಲೆ….

by CityXPress
0 comments

(ಬಂಜಾರರ ದೀಪಾವಳಿಯ ವಿಶೇಷ ಲೇಖನ)

ಭಾರತದ ಮೂಲ ನಿವಾಸಿಗಳಾದ ಬಂಜಾರರ ಇತಿಹಾಸವು ಸುಮಾರು 8,000 ಪ್ರಾಚೀನವಾಗಿದೆ. ಈ ದೇಶದ ವಿವಿಧ ರಾಜ್ಯಗಳಲ್ಲಿ ಹೆಸರುಗಳು ವಿಭಿನ್ನ ರೂಪಗಳಲ್ಲಿ ಕಾಣಿಸುತ್ತವೆ. ಈ ಬಂಜಾರ ಬುಡಕಟ್ಟು ಜನಾಂಗವು ತಮ್ಮ ವಿಶಿಷ್ಟ ಸಂಸ್ಕೃತಿ, ಆಚರಣೆಗಳು ಮತ್ತು ಬೋಲಿಯನ್ನು (ಭಾಷೆಯನ್ನು) ಉಳಿಸಿಕೊಂಡಿದೆ. ಆದರೆ ಜಾಗತೀಕರಣ ಅನ್ಯ ಸಂಸ್ಕೃತಿಗಳ ಪ್ರಭಾವ, ಪರಿಣಾಮ ಸಂಸ್ಕೃತಿಯ ಮೇಲ್ಮುಕ ಚಲನೆ, ಇತ್ತೀಚಿನ ಕಾಲಘಟ್ಟದಲ್ಲಿ, ತಮ್ಮ ಸಂಪ್ರದಾಯ ಮತ್ತು ಆಚರಣೆಗಳನ್ನು ಕಳೆದುಕೊಳ್ಳುವ ಭಯ ಭೀತಿಯ ಪರಿಸ್ಥಿತಿಯಲ್ಲಿದ್ದಾರೆ.

ಬಂಜಾರ ಸಮುದಾಯದಲ್ಲಿ ವಿವಿಧ ಹಬ್ಬ ಆಚರಣೆಗಳನ್ನು ಆಚರಿಸಲಾಗುತ್ತದೆ. ಈ ರೀತಿಯ ಹಬ್ಬ ಉತ್ಸವಗಳಲ್ಲಿ ದೀಪಾವಳಿಯು ಒಂದು. ಇವರು ದೀಪಾವಳಿಯನ್ನು ದವಾಳಿ ಎಂದು ಕರೆಯುತ್ತಾರೆ. ಹಾಗೂ ಗೋರ್ ಬಂಜಾರ ಸಮುದಾಯವು ದೀಪಾವಳಿಯಲ್ಲಿನ ಕಾಳಿಮಾಸ್ ಅಂದರೆ ದೀಪಾವಳಿ ಅಮಾವಾಸ್ಯೆಯನ್ನು ಹೊಸ ವರ್ಷದ ಆಚರಣೆ, ಕಾಳಿಮಾಸ್ ಎಂದು ಆಚರಿಸುತ್ತಾರೆ.

ವಿಶೇಷ ಲೇಖನ : ಪರಮೇಶ ಲಮಾಣಿ.

banner

ಗೋ‌ರ್ ಬಂಜಾರರು ದೀಪಾವಳಿಯ ಮೊದಲನೆಯ ದಿನ ಕಾಳಿಮಾಸ್ ಹಾಗೂ ಎರಡನೆಯ ದಿನ ದಬುಕರ್
ದೇರೋ ದನ್ ಎಂದು ಆಚರಿಸುತ್ತಾರೆ.

ಅಮಾವಾಸ್ಯೆ (ಕಾಳಿಮಾಸ್) ಅಮಾವಾಸ್ಯೆಯ ದಿನ ತಾಂಡದ ನಾಯಕರ ಮನೆಯ ಮುಂದೆ ಕಪ್ಪು ಆಡಿನ ಮರಿಯನ್ನು ಬಲಿ ಕೊಡಲಾಗುತ್ತದೆ. ಅಲ್ಲಿ ತಾಂಡದ ಹಿರಿಯರು ಒಬ್ಬರಿಗೊಬ್ಬರು ಹಣೆಯ ಮೇಲೆ ರಕ್ತ ತಿಲಕವನ್ನ ಹಚ್ಚಿಕೊಂಡು ಆಲಂಗಿಸಿಕೊಳ್ಳುತ್ತಾ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಹಾಗೂ ಚೊಕೊ ಪೂಜಾ ಆಭರಣ ಹಾಗೂ ಆಯುಧಗಳಿಟ್ಟು ಎಲ್ಲರ ಮನೆಗಳಲ್ಲಿ ಪೂಜೆ ನೆರವೇರಿಸುತ್ತಾರೆ. ಎಲ್ಲರೂ ಸೇರಿ ಭೋಜನವನ್ನು ತಯಾರಿಸಿ ಕತ್ತಲಾಗುವದರ ಒಳಗೆ ಸಾಮೂಹಿಕ ಭೋಜನ ಮಾಡಿ ಒಲೆಯ ಬೆಂಕಿ, ದೀಪವನ್ನು ಆರಿಸಿ ತಮ್ಮ ಮನೆಗೆ ತೆರಳುತ್ತಿದ್ದರು. ಬೆಳಕು ಕಾಣಬಾರದು, ಕತ್ತಲು ಇರಬೇಕೆಂದು ತಾವು ಸೇದುವ ಚುಟ್ಟ ಚಿಲುಮೆ ಬಿಡಿಯನ್ನು ಸಹಿತ ಹಚ್ಚುತ್ತಿರಲಿಲ್ಲ. ತಾಂಡದ ಸಂಜೆಯಾದ ತಕ್ಷಣ ನಾಯಕಣ್ ಯುವತಿಯರಿಗೆ ಆಹ್ವಾನ( ಆರೋಳಿ) ನೀಡುತ್ತಾರೆ.

ಹಾಳದಿ ಮಳದಿ ಗಾಟ್ ಗಟಳೋ ದೀವೋ ಗೋಚ್ ಕಪಾಳೇರ ಪಾರ ಆವೋಯೇ ನಾರ ದೀವೋ ಬಾಳಾ ಸುವಾ ಮಟಳೊ
ನಾನಕ ಮೋತೀ ಫೂಲೋ ವಘಾಡಾ.

ಮುಂದಿನ ವರ್ಷದಲ್ಲಿ ವಿವಾಹ ಆಗಿ ಬೇರೆ ತಾಂಡಗಳಿಗೆ ತೆರಳುವ ಯುವತಿಯರು ಮರಿಯಮ್ಮ ಸದ್ಗರು ಸೇವಾಲಾಲ್ ದೇವಸ್ಥಾನದ ದೀಪ ಹಚ್ಚಿ ಪ್ರಾರ್ಥನೆ ಮಾಡುತ್ತಾರೆ. ಹಾಗೂ ಯಾಡಿ ಮರಿಯಮ್ಮ ಸದ್ಗರು ಸೇವಾಭಾಯ ಬಳಿ ಮೇರಾ ಅಂದರೆ ಆಶೀರ್ವಾದ ಬೆಡುತ್ತಾರೆ ನಂತರ ತಾಂಡದ ನಾಯಕ್ – ನಾಯ್ಕಣ ಹಾಗೂ ಗುರು ಹಿರಿಯರ ಬಳಿ
“ವರಸೆ ದನೇರ ಕೋಟ ದವಾಳಿ ಸೇವಾಭಾಯ ತೋನ ಮೇರಾ.”

“ವರಸೆ ದನೆರ ಕೋಟ್ ದವಾಳಿ ಮರಿಯಮ್ಮ ತೋನ ಮೇರಾ.”

“ವರಸೆ ದನೇರ ಕೋಟ ದವಾಳಿ ನಾಯಕ ನಾಯಕಣ ತಮೇನ (ಮೇರಾ)” ಆಶೀರ್ವಾದ ಕೇಳುವ ಯುವತಿಯರಿಗೆ ಒಂದು ರೂಪಾಯಿ ನಾಣ್ಯವನ್ನು ಉಡುಗೊರೆಯಾಗಿ ನೀಡಿ ದೀಪದಲ್ಲಿ ಎಣ್ಣೆ, ಬೆಲ್ಲ ನೀಡಿ ಬಾಯಿ ಸಿಹಿ ಮಾಡಿ ಆಶೀರ್ವದಿಸುತ್ತಾರೆ. ಈ ಒಂದು ರೂಪಾಯಿ ನಾಣ್ಯ ತಾಂಡಾದ ಸ್ಮರಣೆಗೆ ಸವಿ ನೆನಪಿಗೆ ಮದುವೆಯಲ್ಲಿ ಬಂಜಾರ ಸಾಂಪ್ರದಾಯಕ ಉಡುಪು ಘುಂಗಟೋದಲ್ಲಿ ಸೇರಿಸಿ ಕಸೂತಿ ಹೊಲೆಯುತ್ತಾರೆ.

ಮನೆಯಿಂದ ಮನೆಗೆ ತೆರಳುವಾಗ “ರಾತ್ ಅಂದೇರಿಯೇ ದಿವಲೋ ಬಾಳಲಿಜೋ ಪಾಣಿರೊ ತೋಟೊಯೆ ಝರೀ ಝಕಳಲಿಜೊ ಕುತರಾ ಭಸದಿಯತೊ ಹಡಹುಡ ಕರತೀಜೊ ಘರ ಸಕಳಾಯಿ ಮಕಳಾಯಿ ಕರಲೀಜೊ ವಾಟೇಪ ಹವೇಲಿಯೇ ವೀರಾವಾಳಿ ಆಯೇನ ದ.

ಅಯೇನ ದ ಯೇ ಬಾಯೀ ಜಾಯೆನ ದ ಝೂರಿ ಝಕೋಳ ಪಾಣೀ ಪೀಯೇನ ದ ಟೌಟಾಕೇರೀ ಥೀಕಳಿ ಬೇಸೇನ ದ ಬಾಳಿಯಾ ಘೋಡಲೋ ಬೇಸೇನ ದ ರಾತ ಅಂದೇರಿಯೆ ದಿವಲೊ ಬಾಳಲೀಜೊ.
ಪಾಣೀರೋ ತೋಟೋಯೇ ಝರೀ ಝಕೊಳಲಿಜೊ.”

ಎಂದು ಹಾಡುತ್ತಾ ಬಂಜಾರ ಸಮುದಾಯದ ಮೇಲೆ ಆಗಿರುವ ಶೋಷಣೆಯನ್ನು ಸ್ಮರಿಸುತ್ತಾ ಸಾವಿರಾರು ವರ್ಷಗಳಿಂದ ಕತ್ತಲೆಯಲ್ಲಿದ್ದೀರಿ ನಾನು ದೀಪ ಹಿಡಿದು-ಕೊಂಡು ಬಂದಿದ್ದೇನೆ. ನೀವು ಪ್ರಗತಿ ಪರಿವರ್ತನೆಯಡೆ ಬೆಳಕಿನೆಡೆಗೆ ಸಾಗಿರೆನ್ನುತ್ತಾ ತಾಂಡದಲ್ಲಿರುವ ಮನೆಗಳಿಗೆ ಭೇಟಿ ನೀಡಿ ಆಶೀರ್ವಾದ (ಮೇರಾ) ಪಡೆಯುತ್ತಾ, ಈ ಸಂದೇಶವನ್ನ ಸಾರಬಾರಿಸುತ್ತ,
ಅಮಾವಾಸ್ಯೆಯ ಮಾರನೆಯ ದಿನ ಬೆಳಗಿನ ಜಾವ ತಾಂಡದಲ್ಲಿರುವ ಯುವಕರು ಧಾನ್ಯ ಕೇರುವ ಮೊರ ಮತ್ತು ಮರದ ಕೈ ಚಮಚವನ್ನು (ಚಾಟು ಅನ್ ಛಾದಲಾ ಕೂಟನ ತುಕಾರಿ/ಸಿಂಧೂ ರಾಜ್ಯ)/ ಲಯಬದ್ಧವಾಗಿ ಬಾರಿಸುತ್ತ ತಮ್ಮ ದನ ಕರುಗಳ ಕೊಟ್ಟಿಗೆಯ ಸುತ್ತಲೂ ಹಾಡುತ್ತಾ ನರ್ತಿಸುತ್ತಾ ಸುತ್ತುವರಿಯುತ್ತಾರೆ.

ಅಗ ಝಡ ಬಗ ಝಡ ಗಂಗೋಡ ಝಡಜೋ ಆಳಸ ನಿಕಳ ಲಾರ ಬೇಸ್ ವೋಟ ರಂಡೀ ಭಾರ ಬೇಸ್.”

ಇತ್ತ ಬಂಜಾರ ಯುವತಿಯರು ಎಲ್ಲರೂ ಸೇರಿಕೊಂಡು ತಾಂಡಾದ ಹತ್ತಿರ ಇರುವ ಕಾಡಿನ ಕಡೆ ತೆರಳಿ ಹೂವುಗಳನ್ನು ಸಂಗ್ರಹಿಸಲು ಹೋಗುವಾಗ ತಮ್ಮ ಇತಿಹಾಸದ ಹಾಡುಗಳನ್ನು ಹಾಡುತ್ತಾ ಹೋಗುತ್ತಾರೆ.

ದನೇ ದವಾಳೀರೋ ಸಣ್ ಛ ಯೇ ಸಾತಣೋ.
ಬರೂ ಫೂಲ್ ಲೇಯೇನ ಚಾಲೋಯೇ ಯಾ ದನೇ ದವಾಳೀರೋ ಸಣ್ ಛ ಯೇ ಸಾತಣೋ ಹರಿ ಭರೀ ತಮ ರೀಜೋ ಯೇ ಯಾ ರೀ ರಾ ಸಾಯಿ ಲೇ ಸಾಯೀ ಬೋಲತೀ ಜೋ ಯೇ ಯಾ.”

ದನ ದವಾಳೀರೋ ಸಣ ಛ ಯೇ ಸಾತ ಛೇಳೀರೋ ಛೇಳಕ್ಯಾ ಡೋರೂರೋ ಡೋರೂಕ್ಯಾ”

“ಬರೀ ಖಬರ ಮನ ಕೇದೋರೇ ಆಜ ದನ ದವಾಳೀರೋ ಸಣ ಛ ಯೇ ಸಾತ ಲಾಂಬಡೀರ ಫೂಲ ಲೇಯೇನ ಜಾಮಾ ಯೇ ಆಜ”
ಖಾಳಿಯಾರೋ ವಾವಾರ ಛ.
ಖೇಚಡೀರೋ ಝಾಡ ಛ ಯೇ
ವೋರೇ ಹೇಟ ವೀರೇಣಾ ಸುತೋಛ ಯೇ ಆಜ”

“ಹಾತೇಮ ಝರೀ ಪಾಟಲೀಮ ಚುರಮೋ ಚಲೀ ಜಾರಿಯೇ ವಿರೇಣಾರೇ ಖಬರೇನ ವೋಟರೇ ವೀರೇಣಾ ಹಾತ್ ಮುಂಡೋ ಧೋಲ ಮುಠೀ ಏಕ ಚುರಮೋ ಖಾಲರೇ ವೀರೇಣಾ ಝರೀ ಝಕೋಳ ಪಾಣೀ ಪೀಲರೇ ವಿರೇಣಾ”

“ವೀರಾರೇ ದಾಮಣೀತೀ ಛುಟೀಯೇ ಬಳದ ಬಳದ ಢುಂಗರೇತೀ ಹಾಲ ಸೋ ಮೋರ್ ಕಾಂಯಿ ಖಾವಚ ವೀರಾ ಢುಂಗರೇತೀ ಬಳದ ವೋ ಪೀವರೋ ಗಂಗಾರೋ ಯೇ ಪಾಣೀ ಕೂಣ ವಜಾಯೋ ರಂಗೀ ವಾಸಳೀಯೇ ಭುರಿಯಾ ಯೇ ಭೂರಿಯಾ ವರತೀ ಆವ ಯೇ ಝೂಲ ಕೂಣ ಸಿಡಾಯೋ ತಾರೋ ಢಾಬಳೋ ಯೇ ಪಾಮಡೀ ಯೇ ಕೂಣ ಲಗಾಯೋ ಲಾಂಬೀ ಡೋರ್.
ತಾರೀ ಕಾಡೂ ಚಾಂಬಡೀ
ವೋ ಚಾಂಬಡೀಮ್ ಬೇಳೆಯೇ ಸೀಂದಿಯಾ ನೂಣ್.”

ಹೀಗೆ ಕಾಡಿನಲ್ಲಿರುವ ಹೂವುಗಳನ್ನು ಫಲ ಪುಷ್ಪಗಳನ್ನು ಸಂಗ್ರಹಿಸಿಕೊಂಡು ಹಾಡು ಹಾಡುತ್ತಾ ಯುವತಿಯರು ಮರಳಿ ತಾಂಡಾದ ಸದ್ಗರು ಸೇವಾಲಾಲ್ ಮರಿಯಮ್ಮ ದೇವಸ್ಥಾನದ ಮುಂಭಾಗದಲ್ಲಿ ಹೂವುಗಳನ್ನ ಇಟ್ಟು ನೃತ್ಯ ಮಾಡುತ್ತಾ ದೇವರನ್ನು ಆರಾಧಿಸುತ್ತಾರೆ.

ದೀಪಾವಳಿಯ ದಿನ ತಾಂಡದ ಎಲ್ಲಾ ಮನೆಗಳಲ್ಲಿ ಹಿರಿಯರ ಪೂಜೆ ದಬುಕರ್ ಮೂಲಕ ನೆರವೇರಿಸುತ್ತಾರೆ.

ಹಾಗೆಯೇ ಯುವತಿಯರು ಕಾಡಿನಿಂದ ತಂದ ಹೂವುಗಳನ್ನು ಮನೆಯ ಕೊಟ್ಟಿಗೆಯಲ್ಲಿ ಪೂಜಾ ಸ್ಥಳದಲ್ಲಿ ಹಾಗೂ ವಿವಿಧ ಸ್ಥಳಗಳಲ್ಲಿ ಹೂವುಗಳನ್ನು ಇಟ್ಟು ಗೋಧನ್ ಪೂಜಾ ನೆರವೇರಿಸುತ್ತಾ, ಈ ರೀತಿ ಆ ಕುಟುಂಬದವರಿಗೆ ಹಾರೈಸುತ್ತಾರೆ.

“ಖೆವಡಿಯಾ ಮೇವಡಿಯಾ
ಬಾಂಡಿಯಾ ಬುಚಿಯಾ
ಛಾದಲಾಸ ಕಾನೇರ ಛೋಡಕಾಸ ದಾಂತೇರ
ಘೋಡೇರೀ ಘನಾಳೇ ಊಂಟೇರೀ ಕಠಾರೇ
ಧೋಳೀ ಹಾರೇ ಪೀಳೀ ಹಾರೇ
ಲೂಣೀರೋ ಲಚಕೋ ಜಾಮಣೆರೋ ಸಡಕೋ.

ದಾಮಣ ಭರೀ ಗಾವಡೀ ದೊಡ್ಡಿ ಭರೀ ಛೇಳೀ ಘರ ಘರ ವೇಗಿ ಪನವಾಳೀ ಚಾಂದಾ ಸೂರಿಯಾ ದಾಡೇಮ್ ವಜಾಳೋ ಪಡಗೋ ಘರೇಮ ಘಣೋ ಘಣೋ ದೇಸ ದವಾಳೀ ಮಾತಾ ಮಾರ ವೀರಾರೀ ಟಾಂಗೇ ರೂಂಚೀ ಕರೇಸ.”

ದೀಪಾವಳಿಯ ಸಂಜೆ ಗೋಧನ್ ಪೂಜೆ ನೆರವೇರಿಸಿ ಯುವತಿಯರು ಒಂದೆಡೆ ಸೇರಿ ಸಿಹಿ ಭೋಜನ ತಯಾರಿಸಿ ಸಹಪಂಕ್ತಿ ಭೋಜನ ಮಾಡುತ್ತಾರೆ.

ಹೀಗೆ ದೀಪಾವಳಿಯು ಬಂಜಾರ ಸಮುದಾಯದಲ್ಲಿ ಹಿಂದೆ ಈ ಸಮುದಾಯದ ಮೇಲಾಗಿರುವ ದಾಳಿ ಅನ್ಯಾಯ ಹಾಗೂ ಕಳೆದುಹೋಗಿರುವ ಗೋ ಸಂಪತ್ತು ಪ್ರಕೃತಿ ಪೂಜೆ ಗುರು ಹಿರಿಯರ ಪೂಜೆಯ ಮೂಲಕ ವಿಭಿನ್ನವಾದ ಆಚರಣೆಯ ಮೂಲಕ ಬುಡಕಟ್ಟು ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ಈ ಸಮುದಾಯವು ಇಂದು ತುಂಬಾ ಸಂಕ್ರಮಣದ ಕಾಲಘಟ್ಟದಲ್ಲಿದೆ. ಅಪರೂಪದ ಈ ದವಾಳೀ ಮೇರಾ ಮಾಂಗೇರೋ ಸಂಸ್ಕೃತಿ ಉಳಿಸಿ ಬೆಳೆಸಬೇಕಾಗಿರುವುದು ನಮ್ಮ ನಿಮ್ಮೆಲ್ಲರ ಮೇಲಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb