ಗದಗ: ಜಮ್ಮು ಮತ್ತು ಕಾಶ್ಮೀರದಲ್ಲಿ ಮಂಗಳವಾರ ಸಂಭವಿಸಿದ ಭಯಾನಕ ಉಗ್ರರ ದಾಳಿ ಹಿನ್ನೆಲೆಯಲ್ಲಿ ಬಿಜೆಪಿ ಯುವ ನಾಯಕ ವಸಂತ ಪಡಗದ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಪ್ರವಾಸಿಗರಿಗೆ ಧರ್ಮ ಕೇಳಿ ಗುರಿಯಾಗಿಸಿದ ಈ ದಾಳಿಯ ಹಿಂದೆ ಇತ್ತೀಚೆಗೆ ಕೇಂದ್ರ ಸರ್ಕಾರ ಮಂಡಿಸಿದ ವಕ್ಫ್ ಬಿಲ್ ಬಗ್ಗೆ ಉಗ್ರ ಸಂಘಟನೆಗಳ ಆಕ್ರೋಶದ ಪ್ರತಿಫಲವಿರಬಹುದೆಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆಯ ಮೂಲಕ ಮಾತನಾಡಿದ ಅವರು, “ನಿರಪರಾಧ ಜನರ ಪ್ರಾಣಪಾಯಕ್ಕೆ ಕಾರಣವಾದ ಈ ದಾಳಿ ಅತ್ಯಂತ ಕೃತಘ್ನ ಮತ್ತು ಮಾನವೀಯತೆ ವಿರುದ್ಧದ ಕೃತ್ಯವಾಗಿದೆ. ಇದಕ್ಕೆ ಸಂಬಂಧಿಸಿದ ಉಗ್ರರನ್ನು ಮಾತ್ರವಲ್ಲ, ಅವರ ಬೆಂಬಲಿಗ ಸಂಸ್ಥೆಗಳನ್ನು ಸಹ ಶೇಖರಣೆಯಿಂದ ನಿರ್ಮೂಲನೆ ಮಾಡಬೇಕು. ಪಾಕಿಸ್ತಾನದ ಬೆಂಬಲವಿರುವ ಈ ಉಗ್ರ ಚಟುವಟಿಕೆಗಳಿಗೆ ತಕ್ಕ ಪ್ರತಿಕ್ರಿಯೆ ನೀಡಬೇಕು,” ಎಂದು ಒತ್ತಾಯಿಸಿದರು.

ಮೇಲಿನ ಈ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ದಾಳಿ ನಡೆದ ಕೆಲವೇ ಘಂಟೆಗಳಲ್ಲಿ ಭಾರತೀಯ ಭದ್ರತಾ ಪಡೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ ಎಂಬುದನ್ನು ಅವರು ಗಮನಕ್ಕೆ ತಂದು, ಇದು ಸಾಕು ಎನ್ನುವುದಿಲ್ಲ, ದೇಶದೊಳಗಿನ ಉಗ್ರ ನೆಲೆಗಳನ್ನು ಬೇರುಸಹಿತ ಸಮೂಲ ನಾಶ ಮಾಡಬೇಕು ಎಂದು ಹೇಳಿದರು.
“ಇಂತಹ ಸಂದರ್ಭಗಳಲ್ಲಿ ಯಾವುದೇ ರಾಜಕೀಯ ಪಕ್ಷಗಳು ಬದಿಯಿಟ್ಟು, ರಾಷ್ಟ್ರ ಮತ್ತು ನಾಗರಿಕರ ರಕ್ಷಣೆಗಾಗಿ ಏಕತೆಯಿಂದ ನಡೆದುಕೊಳ್ಳಬೇಕು. ಧರ್ಮದ ಹೆಸರಿನಲ್ಲಿ ಗುಂಡಿಕ್ಕುವವರು ನಾಳೆ ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ಭಿನ್ನತೆ ಬೀಜ ಬಿತ್ತುವ ಸಾಧ್ಯತೆ ಇದೆ. ಹೀಗಾಗಿ ಇಂತಹ ಭಯೋತ್ಪಾದನೆಗೆ ಅವಕಾಶ ನೀಡದೆ, ಹಿಂದುತ್ವದ ಸಂರಕ್ಷಣೆಗೆ ನಾವು ಎಲ್ಲಾ ರೀತಿಯ ಸಹಕಾರ ನೀಡಬೇಕು,” ಎಂದು ವಸಂತ ಪಡಗದ ಹೇಳಿದರು.
