ಗದಗ: 2024-25 ನೇ ಸಾಲಿನ ಗದಗ ಗ್ರಾಮೀಣ ವಲಯದ ತಾಲೂಕಾ ಮಟ್ಟದ ಸರಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಗಳು ಶ್ರೀ ಜಗದ್ಗುರು ಬೂದೀಶ್ವರ ವಿದ್ಯಾಪೀಠ ಹೊಸಹಳ್ಳಿಯಲ್ಲಿ ದಿನಾಂಕ:13-12-2024 ರಂದು ಜರುಗಲಿವೆ.
ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ಜಗದ್ಗುರು ಬೂದೀಶ್ವರ ಮಹಾಸ್ವಾಮಿಗಳು ವಹಿಸುವರು.ವಲಯದ ಎಲ್ಲ ಸ್ಪರ್ಧಿಗಳು ಸಕಾಲಕ್ಕೆ ಹಾಜರಿರಲು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ವಿ ವಿ ನಡುವಿನಮನಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.