ಗದಗ: ಇಂದಿನ ತಲೆಮಾರಿನವರು ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ದೊಡ್ಡ ರೋಗಗಳಿಂದ ಬಳಲುತ್ತಿರುವುದು ಅತ್ಯಂತ ಆಘಾತಕಾರಿ ವಿಷಯವಾಗಿದೆ. ಇದನ್ನು ಅರಿತು ಚಿಕ್ಕಟ್ಟಿ ಸಂಸ್ಥೆಯವರು ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳಿಗೆ ‘ಸ್ವರ್ಣ ಬಿಂದು ಪ್ರಾಶನ’ಕಾರ್ಯಕ್ರಮವನ್ನು ಆಯೋಜಿಸಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದು ಡಾ. ಪ್ರಜ್ವಲ್ ಎಂ ಹಿರೇಮಠ ಹೇಳಿದರು.
ನಗರದ ಪ್ರತಿಷ್ಠಿತ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳಿಗೆ ‘ಸ್ವರ್ಣ ಬಿಂದು ಪ್ರಾಶನ’ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಮ್ಮ ವಿದ್ಯಾರ್ಥಿಗಳಿಗೆ ಯಾವ ರೋಗವು ಬರದಂತೆ ಸಧೃಡವಾದ ಆರೋಗ್ಯವನ್ನು ಹೊಂದಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಗಮನವನ್ನು ಕೊಟ್ಟು ಜೀವನದಲ್ಲಿ ದೊಡ್ಡ ಸ್ಥಾನಕ್ಕೇರಲು ಸಹಾಯವಾಗಲೆಂದು ಈ ವಿನೂತನ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಶ್ಲಾಘನೀಯ ಹಾಗೂ ಹೆಮ್ಮೆಯ ವಿಷಯವಾಗಿದೆ. ಈ ಸಂಸ್ಥೆಯಲ್ಲಿ ಕಲಿಯುವ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಧನ್ಯ. ಈ ಕಾರ್ಯಕ್ರಮ ನಡೆಸಿಕೊಡಲಿಕ್ಕೆ ನನ್ನನ್ನು ಆಹ್ವಾನಿಸಿದ್ದು ನನ್ನ ಸುಧೈವ ಎಂದು ಎಂದು ಡಾ.ಪ್ರಜ್ವಲ ಎಂ ಹಿರೇಮಠ ಹೇಳಿದರು.
ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಎಸ್. ವಾಯ್. ಚಿಕ್ಕಟ್ಟಿಯವರು ಮಾತನಾಡಿ, ಶಿಕ್ಷಣ ಹಾಗೂ ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳು, ಆರೋಗ್ಯವಿಲ್ಲದ ಜೀವನ ನಾವಿಕನಿಲ್ಲದ ಹಡಗಿನಂತೆ, ಆರೋಗ್ಯವಿದ್ದಲ್ಲಿ ಎಲ್ಲವೂ ಸುಲಭ. ಹಾಗಾಗಿ ಮಕ್ಕಳ ಆರೋಗ್ಯವೇ ಪ್ರಮುಖ ಅಂಶವಾಗಿರುವುದರಿಂದ ಸ್ವರ್ಣ ಬಿಂದುವನ್ನು ಪ್ರತಿ ತಿಂಗಳು ಪುಷ್ಯ ನಕ್ಷತ್ರ ದಿನದಂದು ಮಾತ್ರ ನೀಡಲಾಗುತ್ತದೆ. ಬೇರೆಡೆ ಹುಡುಕಿಕೊಂಡು ಹೋಗಿ ಹಾಕಿಸುವುದರ ಬದಲಾಗಿ ಮಕ್ಕಳ ಹಿತದೃಷ್ಟಿಯಿಂದ ಚಿಕ್ಕಟ್ಟಿ ಶಾಲೆಯ ಆಡಿಟೋರಿಯಂ ಹಾಲ್‌ನಲ್ಲಿಯೇ ವ್ಯವಸ್ಥೆ ಕಲ್ಪಿಸಿ ಕೊಡಲಾಗಿದೆ ಎಂದರು.
ಸ್ವರ್ಣ ಬಿಂದು ಪ್ರಾಶನ ಕಾರ್ಯಕ್ರಮದಲ್ಲಿ ಡಾ. ವೀರನಗೌಡ ಮೂಗನೂರ, ಸಹಾಯಕ ವೈದ್ಯರಾದ ಶ್ರೀ ಸುಮಿತ್ ರಬಿನಾಳ, ಶ್ರೀ ವಿಶ್ವಾಸ ಹಿರೇಮಠ , ಶ್ರೀ ಕರಿಬಸವರಾಜ ಎಂ, ಪ್ರಾಚಾರ್ಯರಾದ ಬಿಪಿನ್ ಎಸ್ ಚಿಕ್ಕಟ್ಟಿ , ಪ್ರೊ. ಶ್ರೀಮತಿ. ದೀಪಾ ಬಿ ಚಿಕ್ಕಟ್ಟಿ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.