ಬೆಂಗಳೂರು: ನಡೆದಾಡುವ ದೇವರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರಸ್ವಾಮಿಗಳ ಪುತ್ಥಳಿ ವಿರೂಪಗೊಳಿಸಿದ್ದ ಕಿಡಿಗೇಡಿಯನ್ನ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ನಿಮ್ಮ ಸಿಟಿ ಎಕ್ಸಪ್ರೆಸ್ ನ್ಯೂಸ್ ಸಹ, ಪುತ್ಥಳಿ ಭಗ್ನಗೊಳಿಸಿದ ಕುರಿತು ವಿಸ್ಕೃತ ವರದಿ ಬಿತ್ತರಿಸಿತ್ತು.ಇದೀಗ ರಾಜ್ ಶಿವು ಎಂಬಾತನನ್ನು ಬೆಂಗಳೂರಿನ ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಗಿರಿನಗರದ ಬಳಿಯ ವೀರಭದ್ರನಗರ ಬಸ್ ನಿಲ್ದಾಣದ ಬಳಿ ಇರುವ ಶಿವಕುಮಾರ ಶ್ರಿಗಳ ಪುತ್ಥಳಿಗೆ ಈತನು ಕಳೆದ ಶನಿವಾರ ರಾತ್ರಿ ಹಾನಿ ಮಾಡಿದ್ದ ಎನ್ನಲಾಗಿದೆ.
ಇನ್ನು ವಿಚಿತ್ರ ಎಂದರೆ ಶಿವಕುಮಾರ ಸ್ವಾಮಿಗಳ ಪ್ರತಿಮೆ ಭಗ್ನಗೊಳಿಸಲು ಆರೋಪಿ ನೀಡಿರುವ ಕಾರಣ ಕೇಳಿದ್ರೆ, ಬಹಳ ವಿಚಿತ್ರ ಎನಿಸುತ್ತದೆ. ಶಿವಕುಮಾರ್ ಸ್ವಾಮೀಜಿ ಮೂರ್ತಿ ಒಡೆಯುವಂತೆ, ಆರೋಪಿ ಕನಸಿನಲ್ಲಿ ಬಂದು ಏಸು ಹೇಳಿದ್ದರಂತೆ. ಏಸು ಹೇಳಿದ್ದಕ್ಕೆ ಶಿವಕುಮಾರ್ ಸ್ವಾಮೀಜಿ ಮೂರ್ತಿ ವಿರೂಪಗೊಳಿಸಿದ್ದೇನೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಇನ್ನು ಆರೋಪಿ ಶಿವು ಈತನ ಹಿನ್ನೆಲೆ ನೋಡೋದಾದ್ರೆ, ಕಳೆದ ಏಳು ವರ್ಷಗಳ ಹಿಂದೆ ಈತ ಹಿಂದೂ ಧರ್ಮ ತೊರೆದು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ. ಹಿಂದೂ ದೇವತೆಗಳು, ಹಿಂದೂ ಧರ್ಮದ ಸಂತರು, ಸನ್ಯಾಸಿಗಳ ಮೇಲೆ ದ್ವೇಷ ಸಾಧಿಸುತ್ತಿದ್ದನಂತೆ. ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ ವಾಸವಿದ್ದ ಆರೋಪಿ ಶಿವು, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ನಂತರ ಧರ್ಮಾಂದನಂತೆ ವರ್ತಿಸುತ್ತಿದ್ದ. ಹೀಗಾಗಿ, ಶಿವಕುಮಾರ ಸ್ವಾಮೀಜಿ ಮೂರ್ತಿಯನ್ನು ಒಡೆಯಲು ಪ್ಲಾನ್ ಮಾಡಿಕೊಂಡಿದ್ದ ಎನ್ನಲಾಗಿದೆ.
ಶನಿವಾರ ರಾತ್ರಿ ಸುತ್ತಿಗೆ ಸಮೇತ ಬಂದು, ರಾತ್ರಿ ಯಾರು ಇಲ್ಲದ ವೇಳೆ ಪುತ್ಥಳಿ ವಿರೂಪಗೊಳಿಸಿ ಎಸ್ಕೇಪ್ ಆಗಿದ್ದ. ಇದರ ಜೊತೆಗೆ ಕ್ರೈಸ್ತ ಧರ್ಮದ ಪ್ರಚಾರ ಮಾಡಲು ಭಿತ್ತಿಪತ್ರ ಹಂಚುತ್ತಿದ್ದ. ಪತ್ರದಲ್ಲಿನ ಕೋಡ್ ಸ್ಕ್ಯಾನ್ ಮಾಡಿದ್ರೆ ಬೈಬಲ್ ಸಿಗುವಂತೆ ಭಿತ್ತಿಪತ್ರ ಹಂಚುತ್ತಿದ್ದ ಎಂದು ತಿಳಿದು ಬಂದಿದೆ.
ಇನ್ನು ಘಟನೆ ನಡೆದ ತಕ್ಷಣ ಶಿವಕುಮಾರ ಶ್ರೀಗಳ ಅಪಾರ ಭಕ್ತಸಮೂಹ ತಕ್ಷಣ ಆರೋಪಿಯನ್ನ ಬಂಧಿಸಬೇಕೆಂದು ಆಗ್ರಹಿಸಿತ್ತು. ಅಲ್ಲದೇ ರಾಜಕೀಯ ಮುಖಂಡರು ಘಟನೆಗೆ ಖಂಡನೆ ವ್ಯಕ್ತಪಡಿಸಿದ್ದರು.