ಗದಗ: ಅವಳಿ ನಗರದಲ್ಲಿ ಬೀದಿ ದನಗಳ ಹಾವಳಿಗೆ ಅಧಿಕಾರಿಗಳು ಫುಲ್ ಸ್ಟಾಪ್ ಇಟ್ಟಂತೆ ಕಾಣುತ್ತಿಲ್ಲ. ಇದರ ಪರಿಣಾಮ ಬೆಟಗೇರಿ ಟರ್ನಲ್ ಪೇಟೆ, ರಾಮದೇವರ ಗುಡಿ ಹತ್ತಿರ ಸ್ಥಳೀಯ ನಿವಾಸಿ ಪ್ರಕಾಶ ಎಸ್.ಗಂಜಿ ಇವರ ಮೇಲೆ ಬೀದಿ ಗೂಳಿ ದಾಳಿ ಮಾಡಿರುವ ಘಟನೆ ಜರುಗಿದೆ.
ಬಡ ಕುಟುಂಬದ ಕೂಲಿ ಕಾರ್ಮಿಕನಾಗಿರುವ ಇವರು ಕೆಲಸ ಮುಗಿಸಿ ಸಂಜೆ 5 ಗಂಟೆ ವೇಳೆಗೆ ಮರಳಿ ಮನೆಗೆ ಹೋಗುವ ಸಂದರ್ಭದಲ್ಲಿ ಗೂಳಿ ತಿವಿದು ಗಾಯಗೊಳಿಸಿದೆ.
ದಿನನಿತ್ಯ ಮಕ್ಕಳು, ವಯಸ್ಸಾದ ವೃದ್ಧರು, ಸಾರ್ವಜನಿಕರು ಓಡಾಡುವ ಈ ರಸ್ತೆಯಲ್ಲಿ ಬೀದಿ ಗೂಳಿಗಳ ಹಾವಳಿ ಸಾಕಷ್ಟಿದ್ದು, ದಿನನಿತ್ಯ ಸಾರ್ವಜನಿಕರಿಗೆ ಒಂದಿಲ್ಲೊಂದು ರೀತಿಯಿಂದ ತೊಂದರೆ ತಾಪತ್ರಯ ಕೊಡುತ್ತಲೇ ಇವೆ.ಹೀಗಾಗಿ ಕೂಡಲೇ ಸಂಬಂಧಪಟ್ಟವರು ಕ್ರಮ ಜರುಗಿಸಲು ಸ್ಥಳಿಯರು ಆಗ್ರಹಿಸಿದ್ದಾರೆ.