Headlines

SSLC ಫಲಿತಾಂಶ ಪ್ರಕಟಣೆ: ಈ ತಿಂಗಳಲ್ಲಿ ಫಲಿತಾಂಶದ ನೀರಿಕ್ಷೆ..!

ಬೆಂಗಳೂರು: ರಾಜ್ಯದ SSLC ಪರೀಕ್ಷೆಗಳು ಈ ಶುಕ್ರವಾರ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಇದೀಗ ಫಲಿತಾಂಶ ಪ್ರಕಟಣೆಯತ್ತ ನಿರೀಕ್ಷೆಯ ನೋಟ ಹರಡಿದೆ. ಈ ಬಾರಿ ರಾಜ್ಯದಾದ್ಯಾಂತ 240ಕ್ಕೂ ಹೆಚ್ಚು ಮೌಲ್ಯಮಾಪನ ಕೇಂದ್ರಗಳಲ್ಲಿ ಏಪ್ರಿಲ್ 15ರಿಂದ ಮೌಲ್ಯಮಾಪನ ಕಾರ್ಯಾರಂಭವಾಗಲಿದೆ.

ಈ ಸಲ 6 ವಿಷಯಗಳಿಂದ ಒಟ್ಟಾರೆ 55 ಲಕ್ಷಕ್ಕೂ ಅಧಿಕ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಲಿದ್ದು, ಅದರಿಗಾಗಿ 75 ಸಾವಿರಕ್ಕೂ ಹೆಚ್ಚು ಶಿಕ್ಷಕರನ್ನು ನೇಮಿಸಲಾಗಿದೆ. ಕಾರ್ಯಕ್ಷಮತೆ ಮತ್ತು ತ್ವರಿತ ಪ್ರಕ್ರಿಯೆಗಾಗಿ ವಿವಿಧ ತಾಂತ್ರಿಕ ವ್ಯವಸ್ಥೆಗಳನ್ನು ಪ್ರಾರಂಭಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಶೀಘ್ರ ಫಲಿತಾಂಶ ಸಿಗುವ ನಿರೀಕ್ಷೆ ಇದೆ.

ವಿದ್ಯಾರ್ಥಿಗಳು ಹಾಗೂ ಪೋಷಕರು ಬಹು ನಿರೀಕ್ಷೆಯಿಂದ ಕಾದಿರುವ SSLC ಫಲಿತಾಂಶವನ್ನು 2025ರ ಮೇ ತಿಂಗಳ ಮೊದಲ ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಇದಕ್ಕೂ ಮುನ್ನ, ಎಲ್ಲಾ ಮೌಲ್ಯಮಾಪನ ಪ್ರಕ್ರಿಯೆಗಳನ್ನು ನಿಖರವಾಗಿ ಮತ್ತು ನಿಷ್ಠೆಯಿಂದ ಮುಗಿಸಲು ಶಿಕ್ಷಣ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

Leave a Reply

Your email address will not be published. Required fields are marked *