ವಿಜಯನಗರ:ಜಿಲ್ಲೆಯ ಹೂವಿನ ಹಡಗಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಉತ್ತಂಗಿ ಶಂಕರ ಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ಶಂಕರ ಮಹಾ ಸ್ವಾಮೀಜಿಗಳು ವಯೋ ಸಹಜ ಅನಾರೋಗ್ಯದಿಂದ ಲಿಂಗೈಕ್ಯರಾಗಿದ್ದಾರೆ.
ಪೂಜ್ಯರು ಕೊಟ್ಟೂರು ಶ್ರೀ ಗುರು ಬಸವೇಶ್ವರ ದೇವಸ್ಥಾನದ ಕ್ರಿಯಾ ಮೂರ್ತಿಗಳಾಗಿದ್ದರು.
ಪೂಜ್ಯರ ಅಂತ್ಯಕ್ರಿಯೆಯು ಉತ್ತಂಗಿ ಗ್ರಾಮದಲ್ಲಿ ನೆರವೇರಿತು. ಈ ವೇಳೆ ವಿವಿಧ ಮಠದ ಸ್ವಾಮೀಜಿಗಳು ಸೇರಿದಂತೆ ಭಕ್ತಾದಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.