ಗದಗ: ದೇಶದ ಪ್ರಸಿದ್ಧ ಧಾರ್ಮಿಕ ಗುರು ಮತ್ತು ಶಾಂತಿ ಸಾಹಿತಿ ಶ್ರೀ ಶ್ರೀ ರವಿ ಶಂಕರ ಗುರೂಜಿ ಅವರು ಇಂದು ಗದಗ ನಗರಕ್ಕೆ ಭೇಟಿ ನೀಡಿ, ಗದುಗಿನ ಆರಾಧ್ಯ ದೈವವಾದ ಶ್ರೀ ಮನ್ನ ವೀರನಾರಾಯಣನ ದರ್ಶನಾಶೀರ್ವಾದ ಪಡೆದುಕೊಂಡರು.
ಈ ವೇಳೆ ಮಾಧ್ಯಮದವರು ಧರ್ಮಸ್ಥಳ ವಿವಾದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗುರೂಜಿ, “ಧರ್ಮಸ್ಥಳ ಎನ್ನುವುದು ಧರ್ಮದ, ಶಾಂತಿಯ ಸ್ಥಾನವಾಗಿದೆ. ಧರ್ಮಸ್ಥಳದ ಬಗ್ಗೆ ನಮಗೆ ಬಹಳ ವರ್ಷಗಳಿಂದ ತಿಳಿದಿದ್ದು, ಇಲ್ಲಿ ಯಾರಿಗೂ ಶ್ರದ್ಧೆ ಭಂಗವಾಗಬಾರದು. ಎಲ್ಲರೂ ಭಕ್ತಿಯಿಂದ ಶ್ರದ್ಧೆ ಇಟ್ಟುಕೊಂಡು ಧರ್ಮಸ್ಥಳಕ್ಕೆ ಭೇಟಿ ನೀಡಿ. ಧರ್ಮಸ್ಥಳಕ್ಕೆ ಅಂಟಿರುವ ಎಲ್ಲಾ ಕಳಂಕ ಶೀಘ್ರದಲ್ಲಿಯೇ ದೂರವಾಗುತ್ತದೆ” ಎಂದು ಹೇಳಿದರು.
“ಭಕ್ತಿಯಿಂದ ಹಾಗೂ ಶುದ್ಧ ಹೃದಯದಿಂದ ಧರ್ಮಸ್ಥಳಕ್ಕೆ ಭೇಟಿ ನೀಡುವುದು ಅತ್ಯಂತ ಅಗತ್ಯ. ಇಲ್ಲಿ ಎಲ್ಲರ ಶ್ರದ್ಧೆ ಮತ್ತು ನಂಬಿಕೆ ಸುರಕ್ಷಿತವಾಗಿರುತ್ತದೆ.”ಎಂದು ಹೇಳಿದರು.
ಚಂದ್ರ ಗ್ರಹಣದ ಸಂದರ್ಭದಲ್ಲಿ ಭಕ್ತಿ ಅಭ್ಯಾಸಕ್ಕೆ ಸಂದೇಶ
ಗುರುಜಿ ಚಂದ್ರ ಗ್ರಹಣದ ಹಿನ್ನೆಲೆ ಕುರಿತು ತಮ್ಮ ಸಂದೇಶದಲ್ಲಿಯೂ, “ಗ್ರಹಣದ ಸಮಯದಲ್ಲಿ ಜ್ಞಾನ, ಜಪ, ಧ್ಯಾನ ಮಾಡಿ. ಸಮಾಜದಲ್ಲಿ ಶಾಂತಿ, ನೆಲೆ ಮತ್ತು ಸೌಹಾರ್ದತೆಯನ್ನು ಸ್ಥಾಪಿಸುವಂತೆ ಪ್ರಾರ್ಥನೆ ಮಾಡಬೇಕು”ಇಂದಿನ ಚಂದ್ರಗ್ರಹಣದ ಬಗ್ಗೆ ಯಾರೂ ಆತಂಕಪಡಬೇಕಿಲ್ಲ. ಗ್ರಹಣದ ವೇಳೆ ಧ್ಯಾನ ಜಪ ಮಾಡಿದರೆ ಸಾಕು. ಇದು ಜಪಕ್ಕೆ ಶ್ರೇಷ್ಠವಾದ ಜಾಗ. ಸಂಜೆ ಐದು ಗಂಟೆಯೊಳಗೆ ಪ್ರಸಾದ ಸೇವಿಸಿ.ಗ್ರಹಣದ ವೇಳೆ ಜಪ ಮಾಡಿದರೆ ಫಲ ಸಿಗೋದು ಖಚಿತ. ಗ್ರಹಣದಿಂದ ಯಾವ ರಾಶಿಗಳಿಗೂ ಕೇಡು ಎಂಬುದಿಲ್ಲ ಎಂದು ಹೇಳಿದರು.
ಇದೇ ವೇಳೆ ಅವರು ಗದಗದ ಶ್ರೀ ತ್ರಿಕೂಟೇಶ್ವರ ದೇವರ ದರ್ಶನವನ್ನೂ ಪಡೆಯುವ ಮೂಲಕ ಧಾರ್ಮಿಕ ಸಂದೇಶವನ್ನು ಭಕ್ತರಿಗೆ ಹಂಚಿದರು.
ಈ ವೇಳೆ ಶ್ರೀ ಶ್ರೀ ರವಿ ಶಂಕರ ಗುರುಜಿಯವರ ಮಾತುಗಳು ಸ್ಥಳೀಯರು ಮತ್ತು ಭಕ್ತರಿಗೆ ಧರ್ಮಸ್ಥಳಕ್ಕೆ ಹೊಸ ಭಕ್ತಿಪೂರ್ವಕ ದೃಷ್ಟಿಕೋನವನ್ನು ತಂದುಕೊಟ್ಟಿದೆ. ಭಕ್ತರು ತಮ್ಮ ಶ್ರದ್ಧೆ ಮತ್ತು ನಂಬಿಕೆಗಳೊಂದಿಗೆ ಧರ್ಮಸ್ಥಳಕ್ಕೆ ಹೋಗಿ ಶಾಂತಿ ಮತ್ತು ಶುದ್ಧತೆಯನ್ನು ಅನುಭವಿಸಲು ಪ್ರೇರೇಪಿಸುವಂತ ಸಂದೇಶವನ್ನ ಗುರೂಜಿ ನೀಡಿದರು.