Home » News » ಬೇಕಿದೆ ಸ್ಪೀಡ್ ಬ್ರೆಕರ್ ಗಳು: ವೇಗಮಿತಿ ಇಲ್ಲದ ಮುಂಡರಗಿಯ ಡೇಂಜರಸ್ ಕ್ರಾಸ್ ಗಳು!

ಬೇಕಿದೆ ಸ್ಪೀಡ್ ಬ್ರೆಕರ್ ಗಳು: ವೇಗಮಿತಿ ಇಲ್ಲದ ಮುಂಡರಗಿಯ ಡೇಂಜರಸ್ ಕ್ರಾಸ್ ಗಳು!

by CityXPress
0 comments

ಮುಂಡರಗಿ: ಟಿಪ್ಪರ್ ವಾಹನದ ಬ್ರೇಕ್ ಫೇಲ್ ಆಗಿ ಎದುರಿಗೆ ಹೊರಟಿದ್ದ ಲಾರಿಗೆ ಟಿಪ್ಪರ್ ಡಿಕ್ಕಿಯಾಗಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಕೊಪ್ಪಳ ಕ್ರಾಸ್ (ಭೀಮರಾವ್ ವೃತ್ತ) ನಲ್ಲಿ ನಡೆದಿದೆ.

ಗದಗ ರಸ್ತೆಯಿಂದ ಬರುತ್ತಿದ್ದ ಟಿಪ್ಪರ್, ಕೊಪ್ಪಳ ಕಡೆಯಿಂದ ಹೊರಟಿದ್ದ ಲಾರಿ ಮಧ್ಯೆ ಈ ಅಪಘಾತ ಸಂಭವಿಸಿದೆ. ಟಿಪ್ಪರ್ ಬ್ರೇಕ್ ಆಫ್ ಅಗಿ ಲಾರಿಗೆ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.

ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಘಟನೆ ಬಳಿಕ ಟಿಪ್ಪರ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಇನ್ನು ಅಪಘಾತ ಆದ ಹಿನ್ನೆಲೆ ಸ್ಥಳದಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ನಂತರ ಪೊಲೀಸರು ಹರಸಾಹಸ ಪಟ್ಟು ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಡೇಂಜರಸ್ ಕ್ರಾಸ್
ಇನ್ನು ಮುಂಡರಗಿ ಪಟ್ಟಣದಲ್ಲಿ ಕೊಪ್ಪಳ ಕ್ರಾಸ್ ಸೇರಿದಂತೆ, ಹೆಸರೂರು ಕ್ರಾಸ್, ಹಾಗೂ ಬಸ್ ನಿಲ್ದಾಣದ‌ ಎದುರಿನ ರಸ್ತೆಗಳಲ್ಲಿ “ಸ್ಪೀಡ್ ಬ್ರೆಕರ್” ಗಳ ಅವಶ್ಯಕತೆ ಇದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.‌ ಕಾರಣ ಈ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಟ್ರಾಫಿಕ್ ಉಂಟಾಗುವದರಿಂದ ಅಪಘಾತ ಸಂಭವಿಸುವಂಥ ಸಂದರ್ಭ ಸಾಕಷ್ಟಿರುತ್ತದೆ‌.

banner

ಅದರಲ್ಲೂ ಕೊಪ್ಪಳ ಸರ್ಕಲ್ ನಲ್ಲಿ ಬೆಳಿಗ್ಗೆ ಹಾಗೂ ಸಂಜೆ ವೇಳೆ, ಶಾಲಾ ಕಾಲೇಜುಗಳಿಗೆ ಹೋಗುವ ವಾಹನ ಸವಾರರ ಸಂಖ್ಯೆ ಹೆಚ್ಚಾಗಿರುತ್ತದೆ. ಸವಾರರು ತಮ್ಮ ಪುಟ್ಟ ಕಂದಮ್ಮಗಳನ್ನ ಶಾಲೆಗೆ ಕಳಿಸಲು ತೆರಳುತ್ತಾರೆ.‌

ರಾಜ್ಯ ಹೆದ್ದಾರಿ ಆಗಿರುವದರಿಂದ ಈ‌ ಸಮಯದಲ್ಲಿ ಗದಗ ಮಾರ್ಗವಾಗಿ ಬರುವ ಲಾರಿ, ಟಿಪ್ಪರ್ ಗಳು, ಗೂಡ್ಸ್ ವಾಹನ, ಕಾರ್ ಸೇರಿದಂತೆ ಬಹುತೇಖ ವಾಹನಗಳು ಅತ್ಯಂತ ವೇಗವಾಗಿ ಚಲಿಸುತ್ತವೆ. ಈ ವೇಳೆ ಕೊಪ್ಪಳ ರಸ್ತೆ, ಹಾಗೂ ಜಾಗೃತ್ ಸರ್ಕಲ್ ರಸ್ತೆಯಿಂದ ಬರುವ ವಾಹನ ಸವಾರರು ಹಾಗೂ ಪಾದಚಾರಿಗಳು ತಮ್ಮ ಪ್ರಾಣದ ಹಂಗನ್ನ ತೊರೆದು ಕ್ರಾಸ್ ದಾಟುವದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ಈ ಹಿಂದೆ ಅದೆಷ್ಟೋ ಬಾರಿ ಅಪಘಾತಗಳೂ‌ ಕೂಡ ಸಂಭವಿಸಿವೆ. ಇಂದೂ ಸಹ ಸಂಭವಿಸಿರೋ ಲಾರಿ‌ ಮತ್ತು ಟಿಪ್ಪರ್ ಅಪಘಾತ ಸ್ಪೀಡ್ ಬ್ರೆಕರ್ ಗಳು ಇಲ್ಲದ್ದಕ್ಕೆ, ಸಂಭವಿಸಿದೆ‌. ಬ್ರೆಕರ್ ಗಳು ಇದ್ದಿದ್ದರೆ‌ ಈ‌‌ ಅಪಘಾತ ಸಂಭವಿಸುತ್ತಿದ್ದಿಲ್ಲ ಎಂದು ಸ್ಥಳಿಯರ ಅಭಿಪ್ರಾಯವಾಗಿದೆ.

ಇನ್ನಾದರೂ ಸ್ಥಳಿಯ ಪುರಸಭೆ ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆ ಜೊತೆಗೂಡಿ, ಪಟ್ಟಣದ ಡೇಂಜರಸ್ ಸ್ಪಾಟ್ ಗಳಲ್ಲಿ ಸಂಚಾರಿ ನಿಯಮದಡಿ,‌ ಸ್ಪೀಡ್ ಬ್ರೆಕರ್ ಗಳು ಹಾಗೂ ವೇಗಮಿತಿ‌ ಅನುಕರಣೆ ನಿಯಮಗಳನ್ನ ಅಳವಡಿಸಿ,‌ಆದಷ್ಟು ಬೇಗ ಜಾರಿಗೆ ತರುವ ಮೂಲಕ ಸವಾರರ ಪ್ರಾಣರಕ್ಷಣೆಗೆ ಮುಂದಾಗಬೇಕು ಎಂದು ಮುಂಡರಗಿ ತಾಲೂಕಿನ ಸಾರ್ವಜನಿಕರ ಆಗ್ರಹವಾಗಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb