ಎಲೋನ್ ಮಸ್ಕ್ ಅವರ ಸ್ಪೇಸ್ಎಕ್ಸ್ ಭಾರತದ ಜಿಸ್ಯಾಟ್ -20 ದೂರ ಸಂಪರ್ಕ ಉಪಗ್ರಹವನ್ನು ಉಡಾವಣೆ ಮಾಡಲು ಸಜ್ಜಾಗಿದೆ, ಇದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಅಮೆರಿಕದ ಏರೋಸ್ಪೇಸ್ ಕಂಪನಿ ನಡುವಿನ ಸಹಯೋಗದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
ಸ್ಪೇಸ್ಎಕ್ಸ್ನ ಫಾಲ್ಕನ್ 9 ರಾಕೆಟ್ ಬಳಸಿ ಫ್ಲೋರಿಡಾದ ಕೇಪ್ ಕೆನವೆರಾಲ್ನಿಂದ ನವೆಂಬರ್ 19, 2024 ರಂದು ಉಡಾವಣೆ ನಡೆಯಲಿದೆ.ಭಾರತದ ದೂರ ಸಂಪರ್ಕ ಮೂಲಸೌಕರ್ಯವನ್ನು ಹೆಚ್ಚಿಸಲು ಈ ಉಪಗ್ರಹವನ್ನು ವಿನ್ಯಾಸಗೊಳಿಸಲಾಗಿದ್ದು, 14 ವರ್ಷಗಳ ಅವಧಿಗೆ ಕಾರ್ಯನಿರ್ವಹಿಸುವ ಕೆ-ಬ್ಯಾಂಡ್ ಹೈ-ಥ್ರೂಪುಟ್ ಉಪಗ್ರಹ ಇದಾಗಿದೆ.
ಜಿಸ್ಯಾಟ್-ಎನ್ 2 ಎಂದೂ ಕರೆಯಲ್ಪಡುವ ಈ ಉಪಗ್ರಹವು 4,700 ಕೆಜಿ ತೂಕವಿದೆ. ಆದರೆ ಇಸ್ರೋದ ಬಳಿ ಇರುವ ರಾಕೆಟ್ ಗಳು ಈ ಭಾರವನ್ನು ಸಾಗಿಸಲು ಸಾದ್ಯವಿಲ್ಲದಿರುವುದರಿಂದ ಸ್ಪೇಸ್ಎಕ್ಸ್ನೊಂದಿಗೆ ಈ ಸಹಭಾಗಿತ್ವದ ಅಗತ್ಯವಿದೆ.
ಇಸ್ರೋದ ಬಳಿ ಇರುವ LVM-3 ಉಡಾವಣಾ ವಾಹನ 4000 ಕೆಜಿ ತೂಕವನ್ನು ಹೊತ್ತುಕೊಂಡು ಹೋಗುವ ಸಾಮರ್ಥ ಹೊಂದಿವೆ. ಆದ್ದರಿಂದಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಸ್ಪೇಸ್ಎಕ್ಸ್ನೊಂದಿಗೆ ಕೈ ಜೋಡಿಸಿದೆ.
ಈ ಉಪಗ್ರಹವು ಕಾರ್ಯರೂಪಕ್ಕೆ ಬಂದ ನಂತರ, ದೂರದ ಪ್ರದೇಶಗಳಿಗೆ ಇಂಟರ್ನೆಟ್ ಸಂಪರ್ಕ ಮತ್ತು ವಿಮಾನದೊಳಗಿನ ಇಂಟರ್ನೆಟ್ ಸೇವೆಗಳು ಸೇರಿದಂತೆ ದೇಶಾದ್ಯಂತ ಪ್ರಮುಖ ಸೇವೆಗಳನ್ನು ಒದಗಿಸುತ್ತದೆ.