ಚಿಕಿತ್ಸೆಗಾಗಿ ಅಮೇರಿಕಾಕ್ಕೆ ತೆರಳುವ ಮುನ್ಸೂಚನೆ ನೀಡಿದ್ದ ನಟ ಶಿವರಾಜಕುಮಾರ ಇದೀಗ ಟೆಂಪಲ್ ರನ್ ಆರಂಭಿಸಿದ್ದಾರೆ.
ಅನಾರೋಗ್ಯದ ಕಾರಣ ಸರ್ಜರಿಗೆಂದು ಅಮೇರಿಕಾಕ್ಕೆ ತೆರಳುವ ಮುನ್ನ ಶಿವರಾಜ್‌ಕುಮಾರ್ ಮತ್ತು ಗೀತಾ ಅವರ ಕುಟುಂಬ ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಪಡೆದು ದೇವರಿಗೆ ಮುಡಿ ಅರ್ಪಿಸಿದ್ದಾರೆ.
ಚಿಕಿತ್ಸೆ ಪಡೆದು ಸಂಪೂರ್ಣ ಚೇತರಿಕೆ ಕಾಣುವವರೆಗೆ ನಟನೆಯಿಂದ ದೂರವಿರಲು ಶಿವರಾಜ್‌ಕುಮಾರ್ ನಿರ್ಧರಿಸಿದ್ದಾರೆಂದು ವರದಿಯಾಗಿದೆ.
ಶಿವರಾಜಕುಮಾರ ಅಷ್ಟೇ ಅಲ್ಲದೇ, ಪತ್ನಿ ಗೀತಾ ಶಿವರಾಜಕುಮಾರ ಹಾಗೂ ಕುಟುಂಬದ ಎಲ್ಲ ಸದಸ್ಯರು ಮುಡಿ ಅರ್ಪಿಸಿ,ದೇವರ ದರ್ಶನ ಪಡೆದಿದ್ದಾರೆ.