Sunday, April 20, 2025
Homeರಾಜ್ಯಶಿವಾನಂದ ಮಠದ ಜಾತ್ರಾ‌ ಮಹೋತ್ಸವಕ್ಕೆ ಚಾಲನೆ: ಪ್ರಣವ ಧ್ವಜಾರೋಹಣ ನೆರವೇರಿಸಿದ ಜ.ಅಭಿನವ ಶಿವಾನಂದ ಶ್ರೀಗಳು

ಶಿವಾನಂದ ಮಠದ ಜಾತ್ರಾ‌ ಮಹೋತ್ಸವಕ್ಕೆ ಚಾಲನೆ: ಪ್ರಣವ ಧ್ವಜಾರೋಹಣ ನೆರವೇರಿಸಿದ ಜ.ಅಭಿನವ ಶಿವಾನಂದ ಶ್ರೀಗಳು

ಗದಗ: ಶ್ರೀ ಜಗದ್ಗುರು ಶಿವಾನಂದ ಮಠ ಗದಗ ಇದರ 2025 ನೇಯ ಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಮುಂಜಾನೆ 08:00 ಘಂಟೆಗೆ ಓಂಕಾರ ಪ್ರಣವಾಕ್ಷರ ಪ್ರಣವ ಧ್ವಜಾರೋಹಣದೊಂದಿಗೆ ಶ್ರೀ ಜಗದ್ಗುರು ಶಿವಾನಂದ ಬೃಹನ್ಮಠದ 105 ನೇ ವರ್ಷದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ಶ್ರೀ ಜಗದ್ಗುರು ಅಭಿನವ ಶಿವಾನಂದ ಮಹಾಸ್ವಾಮಿಗಳು ಪ್ರಣವ ಧ್ವಜಾರೋಹಣ ನೇರವೇರಿಸಿ ಆರ್ಶಿವಚನ ಮಾಡುತ್ತ ಪ್ರಣವಾಕ್ಷರ ಮಹಾಮಂತ್ರದ ಮಹತ್ವದ ಕುರಿತು ಓಂಕಾರ ಪ್ರಣವಾಕ್ಷರ ಮಹಾಮಂತ್ರವು 07 ಕೋಟಿ ಮಂತ್ರಗಳಲ್ಲಿ ಶ್ರೇಷ್ಠವಾಗಿದೆ ಓಂಕಾರ ಮಹಾಮಂತ್ರ ಉಚ್ಚಾರಣೆ ಮಾಡಿದರೆ ತ್ರಿಮೂರ್ತಿ ದೇವರುಗಳನ್ನು ಸ್ಮರಿಸಿದಂತೆ, ಓಂಕಾರ ಮಂತ್ರೋಚಾರಣೆಯಿಂದ ನಮ್ಮ ಕಾಯ, ವಾಚ, ಮನಸ್ಸು, ಶುದ್ದಿಯಾಗುತ್ತದೆ. ನಮ್ಮಲ್ಲಿ ದೈವಿ ಶಕ್ತಿಯು ಜಾಗೃತವಾಗುವುದು ಎಂದು ಆರ್ಶಿವಚನ ನೀಡಿದರು.

ಜಾತ್ರಾ ಮಹೋತ್ಸವ ಸಮಿತಿಯ ಗೌರವದ್ಯಕ್ಷರಾದ ಬಿ. ಬಿ. ಬಾವಿಕಟ್ಟಿಯವರು, ಶರಣೆ ಮಾತೋಶ್ರೀ ಮುಕ್ತಾತಾಯಿಯವರು ಓಂಕಾರದ ಮಹತ್ವದ ಬಗ್ಗೆ ಮಾತನಾಡಿದರು. ಜಾತ್ರಾ ನಿಮಿತ್ಯ ನಿತ್ಯ ಮಠದ ಪರಂಪರೆಯಂತೆ ದಿನದ 24 ಘಂಟೆ ಶಿವಪಂಚಾಕ್ಷರಿ ಮಂತ್ರ ಭಜನೆ ಸಪ್ತಾಹವು ಪ್ರಾರಂಭವಾಯಿತು.

ನಂತರ ಜಾತ್ರಾ ಮುಖ್ಯ ಕಾರ್ಯಕ್ರಮವಾದ ತೆರಿನ ಗಾಲಿ ಪೂಜೆ ನೇರವೇರಿತು, ಕಾರ್ಯಕ್ರಮದಲ್ಲಿ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಶಿವಾನಂದ ನಡವಲಗುಡ್ಡ, ಕಾರ್ಯಧ್ಯಕ್ಷರಾದ ಶ್ರೀ ರಾಮಣ್ಣ ಹೊಸಮನಿ, ಕಾರ್ಯದರ್ಶಿಗಳಾದ ಶಿವಾನಂದ ಹೆಬಸೂರ, ಜಗಾಪೂರ, ಬಸಯ್ಯ ಬಣಕಾರ, ಸದಸ್ಯರಾದ ಶಿವಾನಂದ ಗುಡಸಾಲಿ, ಶರಣಯ್ಯ ಹಿರೇಮಠ, ಷಡಕ್ಷರಿ ಹಿರೇಮಠ, ಡಾ. ಸಂತೋಷ. ಎನ್. ಬೆಳವಡಿ ಪ್ರಾಚಾರ್ಯರು ಡಿ.ಜಿ.ಎಂ ಆಯುರ್ವೇದಿಕ ಮೆಡಿಕಲ್ ಕಾಲೇಜು ಗದಗ. ಶ್ರೀ ವ್ಹಿ. ಎಪ್. ಮುದ್ದುನಗೌಡ್ರ, ನಿಂಗಪ್ಪ ಬಾರಕೇರ, ಚಿನ್ನಪ್ಪ ತಾವರಗೇರಿ, ಗೋವಿದಪ್ಪ, ಕೆ.ಟಿ. ತುಪ್ಪದ, ಶಿವಣ್ಣ ಹನುಮಕ್ಕನವರ, ಮಲ್ಲಿಕಾರ್ಜುನ ಬೇನ್ನೂರ, ಶಿವಪ್ಪ ಬಣಕಾರ, ಸಂಗಪ್ಪ ಸಂಗನಾಳ, ಗುರುನಾಥ ಹುಡೆದ, ಬಸವರಾಜ ಮಾಸನಗಿ, ಮಳಿಶಾಂತಪ್ಪ ಮಾಸಣಗಿ, ಬಿ.ಬಿ. ಜಗಾಪೂರ, ಕೆ.ವಿ. ಕವಲೂರ, ಕೆ.ಎಂ.ಮುಗಳಿ, ಬಿ.ಎ. ಹಾಲಕೇರಿ, ರಮೇಶ ಕಾಲವಾಡ,ಅಶೋಕ ಸತ್ಯರೆಡ್ಡಿ, ಡಾ. ಜಿ. ಎಸ್. ಹಿರೇಮಠ. ಡಾ. ಉಮೇಶ ಪುರದ, ರಾಜು ಗುಡಸಾಲಿ, ಹನುಮಂತಪ್ಪ ಗುಬ್ಬಿ, ಜಿ. ಎಮ್. ಪಲ್ಲೇದ, ಯಲ್ಲಪ್ಪ ಕೌಜಕೇರಿ ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರು ಭಾಗವಹಿಸಿದ್ದರು. ಬಿ.ಬಿ. ಬಾವಿಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಎಂ. ಬಿ.ಪಾಟೀಲ ವಕೀಲರು ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments