ಇಲಕಲ್ಲ : ನಗರದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಲೆಕ್ಕಿಗ ಶ್ರೀ ಕುಮಾರಸ್ವಾಮಿ ವಿರಕ್ತಮಠ ಅವರು ಪ್ರಸ್ತುತ 2025-26ನೇ ಸಾಲಿಗೆ ಸರ್ವೋತ್ತಮ ಪ್ರಶಂಸನಾ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಮುಖ್ಯ ಕಾರ್ಮಿಕ ಮತ್ತು ಕಲ್ಯಾಣ ಅಧಿಕಾರಿ ತಿಳಿಸಿದ್ದಾರೆ.
2025ನೇ ಇಸ್ವಿಯಲ್ಲಿ ಗರಿಷ್ಠ ಹಾಜರಾತಿ ಹೊಂದಿ, ಯಾವುದೇ ಅಪರಾಧಗಳಿಲ್ಲದೇ ಕಾರ್ಯನಿರ್ವಹಣೆ ಮಾಡಿದ ಹಿನ್ನೆಲೆಯಲ್ಲಿ ಸರ್ವೋತ್ತಮ ಪ್ರಶಂಸನಾ ಗೌರವಕ್ಕೆ ಪಾತ್ರವಾಗಿದ್ದಾರೆ. ಈ ಬಗ್ಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಾಗಲಕೋಟೆ ವಿಭಾಗೀಯ ನಿಯಂತ್ರಣ ಅಧಿಕಾರಿಗಳಿಗೆ ಮುಖ್ಯ ಕಾರ್ಮಿಕ ಮತ್ತು ಕಲ್ಯಣಾಧಿಕಾರಿಗಳು ಪತ್ರ ಬರೆಯುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಪ್ರಶಂಸನಾ ಗೌರವ ಸಂಮಾನವನ್ನು ಇದೇ ಜ.26ರಂದು ಹುಬ್ಬಳ್ಳಿಯ ಕೇಂದ್ರ ಕಛೇರಿಯಲ್ಲಿ ಗಣರಾಜ್ಯೋತ್ಸವದ ದಿನದಂದು ನೆರವೇರಿಸಲಾಗುತ್ತಿದ್ದು, ಪ್ರಶಂಸೆಗೆ ಭಾಜನರಾದ ಐದು ಜನರ ಪೈಕಿ ಇಲಕಲ್ಲ ಡೀಪೋದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಸಹಾಯಕ ಲೆಕ್ಕಿಗ ಕುಮಾರಸ್ವಾಮಿ ವಿರಕ್ತಮಠರನ್ನು ಸಹ ಕಾರ್ಯಕ್ರಮಕ್ಕೆ ಹಾಜರಿರುವಂತೆ ತಿಳಿಸಿದ್ದಾರೆ.
ಸರ್ವೋತ್ತಮ ಪ್ರಶಂಸನಾ ಗೌರವ ಇಲಕಲ್ಲ ಡೀಪೋದ ಸಿಬ್ಬಂದಿ ಭಾಜನರಾಗಿರು ಬಗ್ಗೆ ಡೀಪೋ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಖುಷಿವ್ಯಕ್ತಪಡಿಸಿದ್ದು, ಇದು ನಮ್ಮ ಡೀಪೋಗೆ ಸಂದ ಗೌರವ ಎಂದು ಶ್ಲಾಘಿಸಿದ್ದಾರೆ.
