ಗದಗ: ಗದಗದ ಕನಕ ಭವನದಲ್ಲಿ ಇಂದು ಜರುಗುತ್ತಿರುವ ರಾಜ್ಯಮಟ್ಟದ ಕನಕೋತ್ಸವ ಹಾಗೂ ತಾಲೂಕು ಕುರುಬರ ಸಂಘದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿ.ಎಂ. ಸಿದ್ಧರಾಮಯ್ಯ ಸೇರಿದಂತೆ ಅವರ ಮೊಮ್ಮಗ ಧವನ್ ರಾಕೇಶ್ ಸಿದ್ಧರಾಮಯ್ಯ ಸಹ ಆಗಮಿಸಿದ್ದು, ಸಮಾರಂಭದ ವಿಶೇಷ ಆಕರ್ಷಣೆಯಾಗಿದೆ.
ವರದಿ: ಮಹಲಿಂಗೇಶ ಹಿರೇಮಠ.ಗದಗ
ಸಮಾರಂಭವನ್ನು ಸಿಎಂ ಸಿದ್ಧರಾಮಯ್ಯ ಡೊಳ್ಳು ಬಾರಿಸುವದರೊಂದಿಗೆ ಉದ್ಘಾಟಿಸಿ, ಮೊಮ್ಮಗ ಧವನ್ ಕಡೆಯಿಂದಲೂ ಡೊಳ್ಳು ಬಾರಿಸುವದರೊಂದಿಗೆ ಕಾರ್ಯಕ್ರಮವನ್ನ ವಿಶೇಷವಾಗಿ ಚಾಲನೆ ನೀಡಿದರು.
ಅಲ್ಲದೇ ಇದೇ ವೇಳೆ ಸಂಘಜೀವಿ ಫಕೀರಪ್ಪ ಹೆಬಸೂರರ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಿದರು. ಸ್ಮರಣ ಸಂಚಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಬಿಡುಗಡೆ ಮಾಡಿದರು. ಸಚಿವರು, ಶಾಸಕರು, ಸಂಸದರು ಹಾಗೂ ಗಣ್ಯರು ಸೇರಿದಂತೆ ಅನೇಕ ರಾಜಕೀಯ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.
ಆದರೆ ಈ ಬಾರಿ ಕಾರ್ಯಕ್ರಮದ ಕೇಂದ್ರ ಆಕರ್ಷಣೆಯಾಗಿ ತಾತ ಸಿದ್ಧರಾಮಯ್ಯರ ಜೊತೆ ಮೊಮ್ಮಗ ಧವನ್ ರಾಕೇಶ್ ಸಿದ್ಧರಾಮಯ್ಯ ಹಾಜರಾಗಿದ್ದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಯುವ ಮುಖಂಡನಾಗಿ ಸಾರ್ವಜನಿಕ ಸಮಾರಂಭಕ್ಕೆ ಅವರು ಆಗಮಿಸಿರುವುದು, “ರಾಜಕೀಯ ಪ್ರವೇಶದ ಪ್ರಥಮ ಹೆಜ್ಜೆಯೇ?”, “ಕಾಂಗ್ರೆಸ್ ಭವಿಷ್ಯದ ಮುಖವೇ?” ಎಂಬ ಚರ್ಚೆಗೆ ಕಾರಣವಾಗಿದೆ.
ಸಮಾರಂಭದಲ್ಲಿ ಹಾಜರಿದ್ದ ಕಾರ್ಯಕರ್ತರು, ಅಭಿಮಾನಿಗಳು ಧವನ್ ರಾಕೇಶ್ ಅವರನ್ನು ಗಮನದಿಂದ ನೋಡುವುದರೊಂದಿಗೆ, ಭವಿಷ್ಯದಲ್ಲಿ ಅವರು ಯಾವ ರೀತಿಯ ಪಾತ್ರ ವಹಿಸುವರು ಎಂಬ ನಿರೀಕ್ಷೆಯೂ ವ್ಯಕ್ತವಾಗಿದೆ.