ಶಿವರಾಜ್ ಕುಮಾರ್ ಅಭಿನಯದ ‘ಭೈರತಿ ರಣಗಲ್’ ಚಿತ್ರ ಮೊದಲ ದಿನವೇ ಭರ್ಜರಿ ಗಳಿಕೆ ಮಾಡಿದೆ. ‘ಮಫ್ತಿ’ ಚಿತ್ರದ ಪ್ರೀಕ್ವೆಲ್ ಆಗಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಶಿವಣ್ಣನನ್ನು ಭೈರತಿ ರಣಗಲ್ ಅವತಾರದಲ್ಲಿ ನೋಡಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ. ಮೊದಲ ದಿನ ಸಾರ್ವಜನಿಕರಿಗೆ ಮುಂಜಾನೆ ಶೋ ಇರಲಿಲ್ಲ. ಒಂದೊಮ್ಮೆ ಈ ಶೋಗಳನ್ನು ಇಟ್ಟಿದ್ದರೆ ಹೌಸ್‌ಫುಲ್ ಪ್ರದರ್ಶನ ಕಂಡು ಸಿನಿಮಾದ ಗಳಿಕೆ ಮತ್ತಷ್ಟು ಹೆಚ್ಚುತ್ತಿತ್ತು ಅನ್ನೋದು ಅಭಿಮಾನಿಗಳ ಅಭಿಪ್ರಾಯವಾಗಿದೆ.
‘ಮಫ್ತಿ’ ಚಿತ್ರದ ಪ್ರೀಕ್ವೆಲ್ ಆಗಿ ‘ಭೈರತಿ ರಣಗಲ್’ ಸಿನಿಮಾ ಮೂಡಿಬಂದಿದೆ. ಈ ಮೊದಲು ‘ಭೈರತಿ ರಣಗಲ್’ ಸಿನಿಮಾ ಮಾಡುವ ಆಲೋಚನೆ ನರ್ತನ್ ಅವರಿಗೆ ಇರಲಿಲ್ಲ. ಮಫ್ತಿ ಹಿಟ್ ಆದ ಬಳಿಕ ಅವರಿಗೆ ಆ ರೀತಿಯ ಐಡಿಯಾ ಬಂತು. ಅದಕ್ಕೆ ತಕ್ಕಂತೆ ಉತ್ತಮ ರೀತಿಯಲ್ಲಿ ಕಥೆಯನ್ನು ಹೆಣೆದಿದ್ದಾರೆ. ಈ ಕಾರಣಕ್ಕೆ ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗಿದೆ.
ಕೆಲವು ವರದಿಗಳ ಪ್ರಕಾರ ‘ಭೈರತಿ ರಣಗಲ್’ ಸಿನಿಮಾ ಮೊದಲ ದಿನ ಎರಡರಿಂದ ಐದು ಕೋಟಿ ರೂಪಾಯಿ ಗಳಿಕೆ ಮಾಡಿದೆಯಂತೆ. ಕೇವಲ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿರುವುದರಿಂದ ಇದನ್ನು ಭರ್ಜರಿ ಗಳಿಕೆ ಎಂದೇ ಹೇಳಬಹುದು. ಸಿನಿಮಾಗೆ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದ್ದು, ಬರುವ ದಿನಗಳಲ್ಲಿ ಸಿನಿಮಾ ಉತ್ತಮ ಗಳಿಕೆ ಮಾಡುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನಲಾಗುತ್ತಿದೆ. ಚಿತ್ರಕ್ಕೆ ಉತ್ತಮ ರೇಟಿಂಗ್ ಕೂಡ ಸಿಕ್ಕಿದ್ದು, ಈವರೆಗೆ (ನವೆಂಬರ್ 16ರ ಬೆಳಿಗ್ಗೆ 7 ಗಂಟೆ) ಎರಡು ಸಾವಿರ ಜನ ರೇಟಿಂಗ್ ನೀಡಿದ್ದು, 9.6 ರೇಟಿಂಗ್ ಸಿಕ್ಕಿದೆ.