ಗದಗ: ಶಿವಾಜಿ ಜಯಂತಿ ಮೆರವಣಿಗೆಯಲ್ಲಿ ಗಲಾಟೆ ಮಾಡ್ತಿದ್ದ ಯುವಕನಿಗೆ ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿರುವ ಘಟನೆ ಗದಗ ನಗರದ ಬಸವೇಶ್ವರ ಸರ್ಕಲ್ ಬಳಿ ನಡೆದಿದೆ.
ಶಿವಾಜಿ ಜಯಂತಿ ಹಿನ್ನೆಲೆ ನಗರದ ಪ್ರಮುಖ ಬೀದಿಗಳಲ್ಲಿ ಇಂದು (ಫೆಬ್ರುವರಿ-19) ಅದ್ಧೂರಿ ಮೆರವಣಿಗೆ ಆಯೋಜಿಸಲಾಗಿತ್ತು. ಹೀಗೆ ಬರುತ್ತಿದ್ದ ಮೆರವಣಿಗೆ ರಾಚೂಟೇಶ್ವರ ದೇವಸ್ಥಾನದಿಂದ ಆರಂಭವಾಗಿ ಬಸವೇಶ್ವರ ಸರ್ಕಲ್ ಬಳಿ ಬಂದ ವೇಳೆ
ಈ ಗಲಾಟೆ ನಡೆದಿದೆ.

ಮೈಲಾರಿ ದಂಡೀನ್ ಎಂಬ ಯುವಕ ಕುಡಿದ ಮತ್ತಿನಲ್ಲಿ ಡಿಜೆ ಮೆರವಣಿಗೆ ಮಧ್ಯೆ ಗಲಾಟೆ ಮಾಡಿದ್ದಾನೆ. ಯುವಕನ ಕಿರಿಕಿರಿಯಿಂದ ಬೇಸತ್ತ ಶ್ರೀರಾಮ ಸೇನೆಯ ಹತ್ತಕ್ಕೂ ಹೆಚ್ಚು ಗಣ ವೇಷಧಾರಿಗಳು ಯುವಕನಿಗೆ ಲಾಠಿ ಏಟು ಕೊಟ್ಟು ಥಳಿಸಿದ್ದಾರೆ. ನಂತರ ಆತನನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆದ್ರೆ ಪೊಲೀಸ್ ಠಾಣೆಯಲ್ಲೂ ಮೈಲಾರಿ ಹೈಡ್ರಾಮಾ ಮಾಡಿದ್ದಾನೆ ಎಂದು ತಿಳಿದು ಬಂದಿದೆ.