Shirahatti Block Level Nali Kali Training Ceremony
ಲಕ್ಷ್ಮೇಶ್ವರ: ತಾಲೂಕಿನ ದೊಡ್ಡೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬ್ಲಾಕ್ ಮಟ್ಟದ ನಲಿ-ಕಲಿ ತರಬೇತಿ ಏರ್ಪಡಿಸಲಾಗಿತ್ತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ, ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ನಾಣಕಿ ನಾಯಕ, ನಲಿ ಕಲಿ ತರಗತಿ ನಿರ್ವಹಣೆಯ ಸವಾಲುಗಳು ಹಾಗೂ ಹೊಸ ಬದಲಾವಣೆಗಳ ಮಾಹಿತಿಗಾಗಿ ತರಬೇತಿಗಳು ಅವಶ್ಯಕ ಮತ್ತು ಇಲ್ಲಿ ಪಡೆದುಕೊಂಡ ಅಂಶಗಳನ್ನು ತರಗತಿಯಲ್ಲಿ ಅಳವಡಿಸುವುದು ಅಷ್ಟೇ ಅವಶ್ಯಕ ಎಂದು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಎಂ ಎಸ್ ಹಿರೇಮಠ, ತಾಲೂಕ ಘಟಕದ ಉಪಾಧ್ಯಕ್ಷೆ ಎಲ್ ಎನ್ ನಂದೆಣ್ಣನವರ
ತರಬೇತಿಯ ನೋಡಲ್ ಅಧಿಕಾರಿಗಳಾದಗಳಾದ ಬಿ ಆರ್ ಪಿ ವಾಸು ದೀಪಾಳಿ, ಶಾಲೆಯ ಪ್ರಧಾನ ಗುರುಗಳು ಎಫ್ ಎನ್ ಗೋಣೆಪ್ಪನವರ, ಸಿಆರ್‌ಪಿಗಳಾದ ಜ್ಯೋತಿ ಗಾಯಕ್ವಾಡ, ಶಿವಾನಂದ ಅಸುಂಡಿ ಹಾಜರಿದ್ದರು.
ತರಬೇತಿಯ ಆರ್ ಪಿ ಗಳಾಗಿ ಅಜಿತ್ ಬಣದ, ರಾಘವೇಂದ್ರ ಸಾಂಗ್ಲಿಕರ್, ತಿಪ್ಪನಾಯಕ ಎಲ್. ಆರ್,ಎಚ್ ಬಬಲಿಯವರ, ವಿಜಯಲಕ್ಷ್ಮಿ ಅಕ್ಕಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯ ನಿರ್ವಹಿಸಿದರು.
ಸೂರಣಗಿ ಸಿ ಆರ್ ಪಿ ಲೋಕೇಶ್ ಮಠದ ಸ್ವಾಗತಿಸಿದರು, ಬಡ್ನಿ ಸಿ ಆರ್ ಪಿ ಗಿರೀಶ್ ನೇಕಾರ್ ವಂದಿಸಿದರು.