ಗದಗ: ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನ ಪಡೆಯುವ ಮೂಲಕ ಡಾ.ವಿರೇಶ ಕರಬಸಪ್ಪ ಹಂಚಿನಾಳ ಇವರು ಪ್ರಥಮ ಪ್ರಾಶಸ್ತ್ಯದಲ್ಲಿ ಮತಗಳನ್ನ ಪಡೆದು ಅಭೂತಪೂರ್ವ ಜಯ ದಾಖಲಿಸಿದ್ದಾರೆ.
ಇದೇ ಡಿ.10 ರಂದು ಗದಗನ ಜೀಮ್ಸ್ ಆಸ್ಪತ್ರೆ ಆವರಣದಲ್ಲಿ ಸೆನೆಟ್ ಚುನಾವಣೆಗೆ ಮತದಾನ ಪ್ರಕ್ರಿಯೆ ನಡೆದಿತ್ತು. ರಾಜ್ಯಾದ್ಯಂತ ಅರ್ಹ ಅಭ್ಯರ್ಥಿಗಳು ಈ ಚುನಾವಣೆಗೆ ಸ್ಪರ್ಧೆ ಮಾಡಿದ್ದರು.
ಸದ್ಯ ಚುನಾವಣೆಯಲ್ಲಿ ಚಲಾವಣೆಗೊಂಡು ಸ್ವೀಕೃತವಾದ 17,917 ಮತಗಳಲ್ಲಿ, ಡಾ.ವಿರೇಶ ಹಂಚಿನಾಳ ಅವರು, ಒಟ್ಟು 1957 ಮತಗಳನ್ನ ಪಡೆದು ಆಯ್ಕೆಯಾಗಿದ್ದಾರೆ. ಇದರಲ್ಲಿ ಪ್ರಥಮ ಪ್ರಾಶಸ್ತ್ಯದ 1312 ಮತಗಳನ್ನ ಪಡೆಯುವ ಮೂಲಕ, ಎಣಿಕೆಯ ಮೊದಲ ಸುತ್ತಿನಲ್ಲಿಯೇ, ವಿಜಯದೆಡೆಗೆ ದಾಪುಗಾಲಿಟ್ಟು, ಗೆಲವು ದಾಖಲಿಸುವ ಮೂಲಕ ಅಂತಿಮವಾಗಿ ಡಾ.ವಿರೇಶ್ ಹಂಚಿನಾಳ ಸೆನೆಟ್ ಗೆ ಆಯ್ಕೆಯಾಗಿದ್ದಾರೆ.
ಖ್ಯಾತ ರೆಡಿಯೋಲೆಜಿಸ್ಟ್ ಆಗಿರುವ ಡಾ.ವಿರೇಶ ಹಂಚಿನಾಳ ಅವರಿಗೆ, ಮತದಾರರು ಹಾಗೂ ಆಯುಷ್ ವೈದ್ಯರ ಸಂಘ ಮುಂಡರಗಿ ಹಾಗೂ ಅವರ ಆತ್ಮೀಯ ವೈದ್ಯರ ಬಳಗ ಮತ್ತು ಮುಂಡರಗಿ ತಾಲೂಕಿನ ಗುರುಹಿರಿಯರು ಅಭಿಮಾನಿಗಳು ಹಾಗೂ ಸ್ನೇಹಿತರ ಬಳಗ ಸೇರಿದಂತೆ ಅನೇಕರು ಶುಭಾಶಯಗಳನ್ನ ತಿಳಿಸಿದ್ದಾರೆ.
*ಮುಂಡರಗಿಯಲ್ಲಿ ವಿಜಯೋತ್ಸವ ಆಚರಣೆ*
ಡಾ.ವಿರೇಶ ಹಂಚಿನಾಳ ವಿಜಯಶಾಲಿ ಆಗಿರುವ ಹಿನ್ನೆಲೆ, ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಬೃಂದಾವನ ವೃತ್ತದಲ್ಲಿ ತಾಲೂಕಿನ ಗುರು ಹಿರಿಯರು,ಗಣ್ಯರು ಹಾಗೂ ಅಭಿಮಾನಿಗಳು, ಮತ್ತು ಸ್ನೇಹಿತರು ಕೂಡಿಕೊಂಡು ವಿಜಯೋತ್ಸವವನ್ನ ಆಚರಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುವ ಮೂಲಕ, ಶುಭಾಶಯಗಳನ್ನ ತಿಳಿಸಿದರು.