ಮುಂಡರಗಿ: ಗದಗ ಜಿಲ್ಲೆ ಮುಂಡರಗಿ ಪಟ್ಟಣದ ತಾಲೂಕು ಪಂಚಾಯತ ಸಭಾಭವನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಪ್ರಗತಿ ಪರಿಶೀಲನಾ ಸಭೆ ಹಮ್ಮಿಕೊಳ್ಳಲಾಗಿತ್ತು. ಮಧ್ಯಾಹ್ನ 3 ಗಂಟೆಗೇನೆ ಈ ಸಭೆಯನ್ನು ನಿಗದಿಪಡಿಸಿ, ಎಲ್ಲ ಇಲಾಖೆ ಅಧಿಕಾರಿಗಳಿಗೆ ಸಭೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಲಾಗಿತ್ತು.
ಆದರೆ 4 ಗಂಟೆ ಆದರೂ, ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ಅವರು ಸಭೆಗೆ ಆಗಮಿಸದ ಹಿನ್ನೆಲೆ, ಅಧಿಕಾರಿಗಳೆಲ್ಲರೂ ಕಾದು ಕಾದು ಸುಸ್ತಾದರು. ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಬೇಕಾಗಿದ್ದರಿಂದ, 3 ಗಂಟೆಗೇನೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಗೆ ಆಗಮಿಸಿದ್ದರು. ಆದರೆ ಇಒ ಮಾತ್ರ ಸರಿಯಾದ ಸಮಯಕ್ಕೆ ಬಾರದ ಹಿನ್ನೆಲೆ, ತಮ್ಮೆಲ್ಲಾ ಕಚೇರಿ ಕೆಲಸ, ಕಾರ್ಯಗಳನ್ನ ಬಿಟ್ಟು ಅಧಿಕಾರಿಗಳು ಗಂಟೆಗಟ್ಟಲೆ ಕಾಯುವಂತಾಯಿತು. ಕೊನೆಗೂ 4 ಗಂಟೆ 40 ನಿಮಿಷಕ್ಕೆ ಇಒ ಸಾಹೇಬರು ಸಭೆಗೆ ಹಾಜರಾಗುವ ಮೂಲಕ, ಎಸ್ ಸಿ ಪಿ. ಟಿ ಎಸ್ ಪಿ ಪ್ರಗತಿ ಪರಿಶೀಲನಾ ಸಭೆಯನ್ನ ಆರಂಭಿಸಿದರು.